ಬೆಂಗಳೂರು : ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಎಲ್ಲರೂ ಸೇವಿಸುವ ಹಾಗಿಲ್ಲ,. ಕೆಲವು ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗಬಹುದು.
*ಮಧುಮೇಹ ಸಮಸ್ಯೆ ಇರುವವರು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಅವರು ಈ ಹಾಗಲಕಾಯಿಯನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ ಜೀವಕ್ಕೆ ಆಪತ್ತು ಬರಬಹುದು.
*ಶಸ್ತ್ರಚಿಕಿತ್ಸೆಗೆ ಒಳಗಾದವರು ಹಾಗಲಕಾಯಿಯನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು.
*ಜೀರ್ಣ ಶಕ್ತಿ ಕಡಿಮೆ ಇರುವವರು ಹಾಗಲಕಾಯಿಯನ್ನು ಸೇವಿಸಬೇಡಿ. ಇದರಿಂದ ಅತಿಸಾರ, ಹೊಟ್ಟೆ ನೋವು ಕಾಡಬಹುದು.
*ತಜ್ಞರ ಪ್ರಕಾರ ಸ್ತನಪಾನ ಮಾಡಿಸುವ ತಾಯಂದಿರು, ಗರ್ಭಿಣಿಯರು ಹಾಗಲಕಾಯಿಯನ್ನು ಸೇವಿಸಬಾರದಂತೆ.