Select Your Language

Notifications

webdunia
webdunia
webdunia
webdunia

ಬಾದಾಮಿ ತಿಂದರೆ ನಿಜಕ್ಕೂ ನೆನಪಿನ ಶಕ್ತಿ ಹೆಚ್ಚುತ್ತಾ?

ಬಾದಾಮಿ ತಿಂದರೆ ನಿಜಕ್ಕೂ ನೆನಪಿನ ಶಕ್ತಿ ಹೆಚ್ಚುತ್ತಾ?
ಬೆಂಗಳೂರು , ಸೋಮವಾರ, 2 ಆಗಸ್ಟ್ 2021 (17:31 IST)
ಜಿಂಕ್ ಎನ್ನುವ ಮಿನರಲ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಿನರಲ್ ಬಾದಾಮಿಯಲ್ಲಿ ಹೆಚ್ಚಿದೆ. ಹಾಗಾಗಿ ಬಾದಾಮಿಯನ್ನು ಸೇವಿಸುವುದು ಉತ್ತಮ. ನಾವು ಚಿಕ್ಕವರಿದ್ದಾಗ ಬೆಳಗ್ಗೆ ನೆನೆಸಿದ ಬಾದಾಮಿ ತಿನ್ನುತ್ತಿದ್ದ ನೆನಪು, ಹಾಗೆ ನೆನೆಸಿದ ಬಾದಾಮಿ ಸಿಪ್ಪೆ ಸುಲಿದು ತಿನ್ನುವುದರಿಂದ ನನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನ ಸಹ ಕೇಳಿರುತ್ತೇವೆ.

ಅಲ್ಲದೇ ಮೆದುಳಿನ ಕೆಲಸವನ್ನು ಸರಾಗಗೊಳಿಸಲು ಬಾದಾಮಿ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಬಾದಾಮಿ ನಮ್ಮ ಮೆದುಳಿನ ಶಕ್ತಿಯನ್ನು ನಿಯಂತ್ರಣದಲ್ಲಿ ಇಡುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು, ಆರೋಗ್ಯದ ದೃಷ್ಟಿಯಲ್ಲಿ ಸಹ ಇದು ಒಳ್ಳೆಯದು.
ಜರ್ನಲ್ ಆಫ್ ನ್ಯೂಟ್ರಿಶಿಯನ್ ಅಂಡ್ ಏಜಿಂಗ್ ನಲ್ಲಿ ಪ್ರಕಟವಾದ ಒಂದು ಅಧ್ಯಯನವೊಂದರಲ್ಲಿ, ಬಾದಾಮಿ ಮತ್ತು ಮೆದುಳಿನ ಕ್ರಿಯೆಯ ನಡುವಿನ ಸಂಬಂಧ ಕುರಿತು ಸಂಶೋಧನೆ ನಡೆಸಿದ್ದಾರೆ. ಇದರಲ್ಲಿ ವಿಟಮಿನ್ ಇ, ಪೋಲೇಟ್ ಮತ್ತು ಫೈಬರ್ ಇದ್ದು, ಅವುಗಳು ಮೆದುಳಿನಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುವ ಆ್ಯಂಟಿ ಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತದೆ.
ಹಾಗಾದ್ರೆ ಬಾದಾಮಿ ಹೇಗೆ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ?

ಹೆಲ್ತ್ ಪ್ರಾಕ್ಟೀಷನರ್ ಮತ್ತು ಸರ್ಟಿಫೈಡ್ ಮ್ಯಾಕ್ರೋಬಯೋಟೆಕ್ ಹೆಲ್ತ್ ಕೋಚ್ ಶಿಲ್ಪಾ ಆರೋರಾ ಪ್ರಕಾರ, ಬಾದಾಮಿ ಎಸಿಎಚ್ ಅಸೆಟೈಲ್ಕೋಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಇದು ಮೆದುಳಿನಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅಲ್ ಝೈಮೀರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ರೋಗನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿಯಿಡೀ ಸುಮಾರು 8 ರಿಂದ 10 ಬಾದಾಮಿಯನ್ನು ನೀರಿನಲ್ಲಿ ನೆನಸಿ ಅದನ್ನು ದಿನದಲ್ಲಿ ಸೇವಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಾದಾಮಿಯು ಎಸಿಎಚ್ ಅಸೆಟೈಲ್ಕೋಲಿನ್ ಹೊರತುಪಡಿಸಿ ಬೇರೆ ವಿವಿಧ ಪೋಷಕಾಂಶಗಳನ್ನು ಹೊಂದಿದೆ. ಹಾಗಾಗಿ ಬಾದಾಮಿ ಮೆಮೊರಿ ಸೇರಿದಂತೆ ಮೆದುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ವಿಟಮಿನ್ ಬಿ 6 ಇದ್ದು, ಇದನ್ನು ಪಿರಿಡಾಕ್ಸಿನ್ ಎಂದು ಸಹ ಕರೆಯುತ್ತಾರೆ. ಇದು ಪ್ರೋಟೀನ್ ಗಳ ಜೀರ್ಣಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮೆದುಳಿನಲ್ಲಿರುವ ಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ಕೋಶಗಳಿಗೆ ಸಂವಹನ ನಡೆಸಲು ಬೇಕಾಗುವ ರಾಸಾಯನಿಕವನ್ನು ಉತ್ಪತ್ತಿ ಮಾಡುತ್ತದೆ.
ಜಿಂಕ್ ಎನ್ನುವ ಮಿನರಲ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಿನರಲ್ ಬಾದಾಮಿಯಲ್ಲಿ ಹೆಚ್ಚಿದೆ. ಹಾಗಾಗಿ ಬಾದಾಮಿಯನ್ನು ಸೇವಿಸುವುದು ಉತ್ತಮ. ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಯುತ್ತದೆ. ಬಾದಾಮಿ  ಮೆದುಳಿನ ಕೋಶಗಳು ಹಾಳಾಗುವುದನ್ನು ತಡೆಯುವ ಶಕ್ತಿಯನ್ನು ಹೊಂದಿದೆ.ವಿಟಮಿನ್ ಮೆದುಳಿನಲ್ಲಿರುವಂತಹ ಜೀವಕೋಶಗಳಿಗೆ ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಸತ್ವ ಹೆಚ್ಚಿದೆ. ಇದು ಜೀವಕೋಶಗಳಿಗೆ ಹಾನಿಯಾದರೆ ಅದು ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ ಇ ಇವುಗಳಿಗೆ ಪರಿಹಾರವಾಗಿದ್ದು, ಜೀವಕೋಶಗಳ ಮೇಲೆ ವಿಟಮಿನ್ ಇ ಒಳ್ಳೆಯ ಪರಿಣಾಮ ಬೀರುವುದರಿಂದ ಹೆಚ್ಚಿನ ಪ್ರಯೋಜನ ನೀಡುತ್ತದೆ.
ಇನ್ನು ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿ ಇದ್ದು, ತೂಕ ಇಳಿಸಿಕೊಳ್ಳುವ ಯೋಚನೆಯಲ್ಲಿ ಇದ್ದರೆ ಬಾದಾಮಿಯನ್ನು ನಿಯಮಿತವಾಗಿ ಸೇವಿಸಿ. ಇಲ್ಲದಿದ್ದಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಅಂದರೆ 8 ರಿಂದ 10 ಬಾದಾಮಿಯ ಜಾಗದಲ್ಲಿ ಕೇವಲ ನಾಲ್ಕರಿಂದ ಐದನ್ನು ಸೇವಿಸುವುದು ಉತ್ತಮ. ಆದರೆ ಇದನ್ನು ನಾವು ಮಾಡುವ ಡಯೆಟ್ ಆಹಾರದಲ್ಲಿ ಕೂಡ ಸೇವಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದು ಕೂಡ ಡಯೆಟ್ ಗೆ ಸಹಾಯ ಮಾಡುತ್ತದೆ. ಬಾದಾಮಿ ದೇಹದ ತೂಕದ ವಿಚಾರದಲ್ಲಿ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗಾದ್ರೆ ಬಾದಾಮಿ ಸೇರಿಸಿ ಯಾವ ಡಯೆಟ್ ಫುಡ್ ಮಾಡಬಹುದು ಅನ್ನೋ ಅನುಮಾನ ಇದ್ದರೆ , ಇಲ್ಲಿದೆ ಆ ಲಿಸ್ಟ್
•  ಬಾಳೆಹಣ್ಣು ಮತ್ತು ಬಾದಾಮಿ ಗಂಜಿ
•  ಬಾದಾಮಿ ಹಲ್ವ
•  ಬಾದಾಮಿ ಮತ್ತು ಅಣಬೆ ಸೂಪ್


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕಿತರ ಕಣ್ಣೀರಿನಿಂದಲೂ ಹರಡುತ್ತೆ ವೈರಸ್!