Publish Date: Mon, 02 Sep 2019 (07:44 IST)
Updated Date: Mon, 02 Sep 2019 (07:46 IST)
ಬೆಂಗಳೂರು: ಮಹಿಳೆಯರಲ್ಲಿ ಹಲವು ಕಾರಣಗಳಿಂದ ಬಹುಬೇಗನೇ ಗುಪ್ತಾಂಗದಲ್ಲಿ ಸೋಂಕು ಉಂಟಾಗಿ ತುರಿಕೆ, ನೋವು ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಶುಚಿತ್ವದ ಕೊರತೆ, ಕೆಲವು ಔಷಧಿಗಳ ಸೇವನೆಯ ಅಡ್ಡಪರಿಣಾಮ ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕವೂ ಕಾರಣವಿರಬಹುದು. ಇದನ್ನು ನಿವಾರಿಸಲು ಸಿಂಪಲ್ ಪರಿಹಾರವೆಂದರೆ ಕೊಬ್ಬರಿ ಎಣ್ಣೆ. ಸೋಂಕು ತೆಗೆಯಲು ಕೊಬ್ಬರಿ ಎಣ್ಣೆ ಉಪಯುಕ್ತ. ಗುಪ್ತಾಂಗದ ಸುತ್ತಲೂ ಕೊಬ್ಬರಿ ಎಣ್ಣೆ ಹಚ್ಚಿ ಸುಮಾರು 20 ನಿಮಿಷ ಹಾಗೆಯೇ ಬಿಡಿ. ಬಳಿಕ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿದರೆ ನಿಧಾನವಾಗಿ ಸೋಂಕು ಮಾಯವಾಗುವುದು.