Publish Date: Sat, 31 Aug 2019 (09:48 IST)
Updated Date: Sat, 31 Aug 2019 (09:50 IST)
ಬೆಂಗಳೂರು: ಮದುವೆಯಾದ ಆರಂಭದಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ ಆಗ ಪದೇ ಪದೇ ಒಂದೇ ದಿನಕ್ಕೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುತ್ತದೆ. ಆದರೆ ಸಮಯ ಕಳೆದಂತೆ ಇದು ಕಡಿಮೆಯಾಗುತ್ತಿದೆ ಎಂಬ ಆತಂಕ ಕೆಲವರಿಗೆ ಕಾಡುತ್ತದೆ.
ಹೊಸದಾಗಿ ಲೈಂಗಿಕ ಕ್ರಿಯೆ ನಡೆಸುವಾಗ ಇದು ಸಹಜ. ದಿನಕ್ಕೆ ನಾಲ್ಕೈದು ಬಾರಿ ಮಾಡಿದರೂ ಇಬ್ಬರಿಗೂ ಸಂತೋಷ ಸಿಗುತ್ತದೆ ಎಂದರೆ ತೊಂದರೆಯೇನೂ ಇಲ್ಲ. ಆದರೆ ಯಾವುದೇ ಕೆಲಸವಾದರೂ ಪದೇ ಪದೇ ಮಾಡುವುದರಿಂದ ಆಸಕ್ತಿ ಕಡಿಮೆಯಾಗುವುದು ಸಹಜ. ಹಾಗೆಯೇ ವಯಸ್ಸಾದಂತೆ ಲೈಂಗಿಕಾಸಕ್ತಿ, ಉದ್ರೇಕ ಕಡಿಮೆಯಾಗುತ್ತಾ ಹೋಗುತ್ತದೆ. ವಯಸ್ಸಿಗೆ ತಕ್ಕ ಹಾಗೆ ನಮ್ಮ ಬಯಕೆಗಳನ್ನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆತಂಕಬೇಕಾಗಿಲ್ಲ.