Webdunia - Bharat's app for daily news and videos

Install App

ನನ್ನ ಪತಿಯ ಸಹೋದರ ನನ್ನ ಮೇಲೆ ಆಕರ್ಷಿತನಾಗಿದ್ದಾನೆ. ಏನು ಮಾಡಲಿ?

Webdunia
ಮಂಗಳವಾರ, 19 ಮಾರ್ಚ್ 2019 (06:44 IST)
ಬೆಂಗಳೂರು : ಪ್ರಶ್ನೆ : ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದು, ನಾನು ಮತ್ತು ನನ್ನ ಪತಿ ಇಬ್ಬರು ಅವರ ಕಿರಿಯ ಸಹೋದರನ ಜೊತೆ ವಾಸವಾಗಿದ್ದೇವೆ. ಆತ ನಿರುದ್ಯೋಗಿಯಾಗಿದ್ದು, ನಾನು ಆತನನ್ನು ನನ್ನ ಸಹೋದರನಂತೆ ನೋಡಿಕೊಳ್ಳುತ್ತಿದ್ದೇನೆ. ಆದರೆ ಆತ ನನ್ನ ಮೇಲೆ ಆಕರ್ಷಿತನಾಗಿದ್ದಾನೆ. ನಾನು ಮಲಗಿದ್ದಾಗ ಎಲ್ಲೆಂದರಲ್ಲಿ ಮುಟ್ಟುತ್ತಾನೆ ಹಾಗೇ ನಾನು ಎಲ್ಲೇ ಹೋದರು ಅಲ್ಲಿಗೆ ಬರುತ್ತಾನೆ. ಆದ್ದರಿಂದ ಈ ವಿಚಾರವನ್ನು ನನ್ನ ಪತಿಗೆ ಹೇಗೆ ಹೇಳಲಿ. ನಾವು ಹೊಸದಾಗಿ ಮದುವೆಯಾಗಿರುವುದರಿಂದ ಅವರು ನನ್ನ ಮಾತನ್ನು ನಂಬುತ್ತಾರಾ? ದಯವಿಟ್ಟು ಪರಿಹಾರ ತಿಳಿಸಿ.


ಉತ್ತರ : ನೀವು ಈಗಿನಿಂದಲ್ಲೇ ಆತನ ವಿಚಾರದಲ್ಲಿ ಗಡಿಗಳನ್ನು ಹಾಕಿಕೊಳ್ಳುವುದು ಉತ್ತಮ. ಆತ ನಿಮ್ಮ ಬೆಡ್ ಬಳಿ ಬಂದರೆ ಹೀಗೆ ಬರುವುದು ಸರಿಯಲ್ಲ ಎಂದು ಆತನಿಗೆ ತಿಳಿಸಿ. ನೀವು ಈ ವಿಚಾರದಲ್ಲಿ ಹೆದರಿದರೆ ಆತನ ಧೈರ್ಯ ಮತ್ತಷ್ಟು ಹೆಚ್ಚಿ ಈ ಕೆಲಸವನ್ನು ಮುಂದುವರಿಸಬಹುದು. 


ಇಂತಹ ಸಂದರ್ಭಗಳಲ್ಲಿ ನಿಮ್ಮ ಸುರಕ್ಷತೆ ಮುಖ್ಯ.ಈ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿದರೆ ಆತನನ್ನು ಮತ್ತಷ್ಟು ಪ್ರೋತ್ಸಾಹಿಸದಂತಾಗುತ್ತದೆ. ಆದ್ದರಿಂದ ನೀವು ಭಯಪಡಬಾರದು. ಹಾಗೇ ನಿಮ್ಮ ಸ್ಪೀಡ್ ಡಯಲ್ ಲಿಸ್ಟ್ ನಲ್ಲಿ  ತುರ್ತು ಸಂಖ್ಯೆಯನ್ನು ಇರಿಸಿಕೊಳ್ಳಿ.


ಈ ವಿಚಾರವನ್ನು ನಿಮ್ಮ ಪತಿಗೆ ತಿಳಿಸುವುದು ಉತ್ತಮ. ಆದರೆ ಈ ವಿಚಾರವನ್ನು ಹೇಳುವಾಗ ಅವರ ತಮ್ಮನನ್ನು ದೋಷಿಸುವ ರೀತಿಯಲ್ಲಿ ಹೇಳಬೇಡಿ. ಬದಲಾಗಿ ಅವರಿಗೆ ಈ ಬಗ್ಗೆ ಅರಿವು ಮೂಡುವ ರೀತಿ ಹೇಳಿ ಅರ್ಥ ಮಾಡಿಸಿ. ಈ ವಿಚಾರದಲ್ಲಿ ನೀವು ತಪ್ಪು ಮಾಡಿದ್ದೀರಿ ಎಂದು ಭಾವಿಸಬೇಡಿ. ಅದಕ್ಕಾಗಿ ನೀವು ಪಶ್ಚತಾಪಡುವ ಅಗತ್ಯವಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments