Select Your Language

Notifications

webdunia
webdunia
webdunia
webdunia

ನನ್ನ ಗೆಳೆಯನಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ.ಈ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ?

ನನ್ನ ಗೆಳೆಯನಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ.ಈ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ?
ಬೆಂಗಳೂರು , ಗುರುವಾರ, 14 ಮಾರ್ಚ್ 2019 (07:00 IST)
ಬೆಂಗಳೂರು : ಹಾಯ್. ನಾನು ನನ್ನ ಗೆಳೆಯನ ಜೊತೆ 3 ವರ್ಷಗಳಿಂದ ಡೇಟಿಂಗ್ ನಲ್ಲಿದ್ದೇನೆ. ಆತ ತುಂಬಾ ಒಳ್ಳೆಯ ವ್ಯಕ್ತಿ. ಆದರೆ ನಾವು ದೈಹಿಕವಾಗಿ ಹೊಂದಿಕೊಳ್ಳಲು ಆಗುತ್ತಿಲ್ಲ. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಆದರೆ ನಮ್ಮಿಬ್ಬರ ನಡುವೆ ಸೆಕ್ಸ್ ವಿಚಾರದಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರೂ ಆತನಿಂದ ನನಗೆ ಸೆಕ್ಸ್ ವಿಚಾರದಲ್ಲಿ ತೃಪ್ತಿ ಸಿಗುತ್ತಿಲ್ಲ. ಇದರಿಂದ ನಮ್ಮ ಸಂಬಂಧ ಹಾಳಾಗುತ್ತಿದೆ. ಈ ಪರಿಸ್ಥಿತಿಯನ್ನು ನಾನು ಸರಿಪಡಿಸಿಕೊಳ್ಳಬಹುದೇ? ಲೈಂಗಿಕ ಸಂಬಂಧವಿಲ್ಲದೇಯೇ ನನ್ನ ಸಂಬಂಧದಲ್ಲಿ ನಾನು ಸಂತೋಷವಾಗಿರಲು ಸಾಧ್ಯವೇ?ದಯವಿಟ್ಟು ತಿಳಿಸಿ.


ಉತ್ತರ :  ಸಂಬಂಧದಲ್ಲಿ ದೈಹಿಕ ಹೊಂದಾಣಿಕೆ ಅತಿ ಮುಖ್ಯವಾದ್ದರಿಂದ ನೀವು ಸೆಕ್ಸ್ ಕೌನ್ಸಿಲರ್ ನ ಸಲಹೆಗಳನ್ನು ಪಡೆಯುವುದು ಉತ್ತಮ. ಹಾಗೇ ನಿಮ್ಮ ಲೈಂಗಿಕ ಕ್ರಿಯೆಯಲ್ಲಿ ವಿವಿಧ ರೀತಿಯಲ್ಲಿ ಪ್ರಯತ್ನಿಸುವುದರ ಮೂಲಕ ನಿಮ್ಮ ಲೈಂಗಿಕ ಜೀವನವನ್ನು ಸ್ವಲ್ಪ ಆಸಕ್ತಿದಾಯಕವಾಗಿಸಬಹುದು. ಜೊತೆಗೆ ಕೆಲವು ಸುರಕ್ಷಿತ ಸೆಕ್ಸ್ ಟಾಯ್ಸ್ ಗಳನ್ನು ಬಳಸಿಕೊಳ್ಳಬಹುದು.


ಲೈಂಗಿಕ ಹೊಂದಾಣಿಕೆ ಇಲ್ಲವಾದರೆ  ದೀರ್ಘಾವಧಿ ಸಂಬಂಧದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಅಂದಮಾತ್ರಕ್ಕೆ  ನಿಮ್ಮ ಮುಂದಿನ ಸಂಬಂಧವು ಪರಿಪೂರ್ಣವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಪ್ರತಿಯೊಂದು ಆಯ್ಕೆಯು ಪರಿಣಾಮವನ್ನುಂಟುಮಾಡಬಹುದು. ಆದರೆ ಅದನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂಬುದು ಬಹಳ ಮುಖ್ಯ. ಆದ್ದರಿಂದ ನಿಮ್ಮ ಪರಿಸ್ಥಿತಿ ಸುಧಾರಿಸಲು ಅತ್ಯುತ್ತಮ ಮಾರ್ಗವೆಂದರೆ ನೀವು ನಿಮ್ಮ ಸಂಗಾತಿಯ ಜೊತೆಗೆ ಉತ್ತಮವಾದ ಸಂಹವಹನ ನಡೆಸಿ ನಿಮ್ಮ ಗುರಿಯನ್ನು ತಲುಪುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ಬಾರಿ ಸಂಭೋಗ ಮಾಡಿದ್ರೆ ಒಳ್ಳೇದು ಗೊತ್ತಾ?