Select Your Language

Notifications

webdunia
webdunia
webdunia
webdunia

ಪುರುಷರೇ ನಿಮ್ಮ ವೀರ್ಯದ ಗುಣಮಟ್ಟ ವನ್ನು ಈ ರೀತಿಯಾಗಿ ತಿಳಿಯಬಹುದು

ಪುರುಷರೇ ನಿಮ್ಮ ವೀರ್ಯದ ಗುಣಮಟ್ಟ ವನ್ನು ಈ ರೀತಿಯಾಗಿ ತಿಳಿಯಬಹುದು
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (07:22 IST)
ಬೆಂಗಳೂರು: ದಂಪತಿಗಳಲ್ಲಿ ಸ್ತ್ರೀ ಪುರುಷರಿಬ್ಬರು ಆರೋಗ್ಯವಾಗಿದ್ದರೆ ಮಾತ್ರ ಸಂತಾನ ಪಡೆಯಲು ಸಾಧ್ಯ. ಮುಖ್ಯವಾಗಿ ಪುರುಷರ ವೀರ್ಯದ ಗುಣಮಟ್ಟ ಸರಿಯಾಗಿದ್ದರೆ ಸಂತಾನ ಪ್ರಾಪ್ತಿಯಾಗಲು  ಅವಕಾಶವಿರುತ್ತದೆ. ವೀರ್ಯಾದಲ್ಲಿ ವೀರ್ಯಾಣುಗಳು ಸಕ್ರಿಯವಾಗಿರದಿದ್ದರೆ ಹಾಗು ಕಡಿಮೆ ಸಂಖ್ಯೆಯಲ್ಲಿದ್ದರೆ ಸಂತಾನ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಪುರುಷರಲ್ಲಿ ವೀರ್ಯಾಣುಗಳು ಸಕ್ರಿಯವಾಗಿದೆ ಎಂದು ಈ ರೀತಿಯಾಗಿ ತಿಳಿಯಬಹುದು.


ಅಗಲವಾದ ಬಾಹುಗಳು, ಚೌಕಾಕಾರದ ದವಡೆಗಳಿರುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಚೆನ್ನಾಗಿರುವುದಿಲ್ಲ ಬಿಗಿಯಾದ ಒಳ ಉಡುಪುಗಳನ್ನು, ಪ್ಯಾಂಟ್ ಗಳನ್ನು ಧರಿಸುವವರ ವೀರ್ಯದ ಗುಣಮಟ್ಟ ಕಡಿಮೆ ಇದ್ದು, ವೀರ್ಯಾಣು ಸಂಖ್ಯೆ ಕೂಡ ಕಡಿಮೆ ಇರುತ್ತದೆ. ಪುರುಷರು ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು. ಅದನ್ನು ಉಪಯೋಗಿಸುವವರಿಗೆ ವೀರ್ಯದ ಗುಣಮಟ್ಟ ಕಡಿಮೆ ಇರುತ್ತದೆ. ಚಿಕನ್, ಮಟನ್ ಗಿಂತಲೂ ಮೀನುಗಳನ್ನು ತಿನ್ನುವವರ ವೀರ್ಯಾಣು ಸಂಖ್ಯೆ ಅಧಿಕವಾಗಿರುತ್ತದೆ.


ವ್ಯಾಯಾಮ ಮಾಡದಿರುವವರಿಗಿಂತ ಪ್ರತಿದಿನ ವ್ಯಾಯಮ ಮಾಡುವವರ ವೀರ್ಯ ಉತ್ಪತ್ತಿ ಅಧಿಕವಾಗಿದ್ದು , ಸಕ್ರಿಯವಾಗಿರುತ್ತದೆ. ನಾಭಿಯ ಬಳಿ ಕೊಬ್ಬು, ಡೊಳ್ಳು ಹೊಟ್ಟೆ ಇರುವವರ ವೀರ್ಯಾದ ಗುಣಮಟ್ಟ ಚೆನ್ನಾಗಿರುವುದಿಲ್ಲ. ಧ್ವನಿ ಕಡಿಮೆ ಇರುವ ಪುರುಷರಲ್ಲಿ ವೀರ್ಯಾದ ಉತ್ಪತ್ತಿ ಕಡಿಮೆಯಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ರೂಂನಲ್ಲಿ ಈ ವಸ್ತುಗಳಿದ್ದರೆ ಸೆಕ್ಸಿ ಮೂಡ್ ಹೆಚ್ಚಾಗುತ್ತೆ!