Publish Date: Wed, 11 Sep 2019 (13:51 IST)
Updated Date: Wed, 11 Sep 2019 (13:53 IST)
ಪ್ರಶ್ನೆ: ನನ್ನ ಅಣ್ಣನಿಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ಆತನಿಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ಆತನ ಹಲವು ಕಾರ್ಯಕ್ರಮಗಳಿಗೆ ನರ್ಸ್ ವೊಬ್ಬಳು ತಪ್ಪದೇ ಬರುತ್ತಿದ್ದಳು.
ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದಾರೆ. ಇಬ್ಬರೂ ಸರಕಾರಿ ನೌಕರರೇ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ನರ್ಸ್ ಗೆ ಮೂರು ಮಕ್ಕಳಿದ್ದಾರೆ. ನನ್ ಅಣ್ಣನ ಅನೈತಿಕ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.
ಉತ್ತರ: ಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನೋದು ಗೊತ್ತಾಗುತ್ತಿಲ್ಲ. ನಿಮ್ಮ ಅಣ್ಣನಿಗೆ ತಿಳಿಹೇಳಿ.
ಹಿರಿಯರಿಂದ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಬಗೆಹರಿಸಿಕೊಳ್ಳಿ. ಇದು ಸಾಧ್ಯವಾಗದಿದ್ದರೆ ನಿಮ್ಮ ಅತ್ತಿಗೆಯಿಂದ ನಿಮ್ಮ ಅಣ್ಣ ಹಾಗೂ ನರ್ಸ್ ವಿರುದ್ಧ ಕೇಸ್ ಹಾಕಿ.