Select Your Language

Notifications

webdunia
webdunia
webdunia
webdunia

ಓರಲ್ ಸೆಕ್ಸ್‌ನಿಂದ ಏನ್ ಆಗುತ್ತೆ ಗೊತ್ತಾ!

ಓರಲ್ ಸೆಕ್ಸ್‌ನಿಂದ ಏನ್ ಆಗುತ್ತೆ ಗೊತ್ತಾ!
ಬೆಂಗಳೂರು , ಶನಿವಾರ, 23 ಡಿಸೆಂಬರ್ 2017 (16:50 IST)
ಇದೇನಿದು ಓರಲ್ ಸೆಕ್ಸ್‌ನಿಂದ ಕ್ಯಾನ್ಸರ್ ಆಗುತ್ತಾ? ಆಶ್ಚರ್ಯ ಆಗುತ್ತಿದೆಯಾ ? ಹೌದು ಖಂಡಿತವಾಗಿಯು ಕ್ಯಾನ್ಸರ್‌ ಆಗುತ್ತೆ. ಸೆಕ್ಸ್‌ನಲ್ಲಿ ವಿಭಿನ್ನ ಪ್ರಕಾರಗಳು ಮತ್ತು ವಿಭಿನ್ನ ಭಂಗಿಗಳೂ ಇವೆ. ಆದರೆ ಎಲ್ಲವೂ ಆರೊಗ್ಯಕರವಲ್ಲ. ಮುಖ್ಯವಾಗಿ ಓರಲ್‌ ಸೆಕ್ಸ್ ತುಂಬಾ ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟಕ್ಕೂ ಓರಲ್‌ ಕ್ಯಾನ್ಸರ್ ಹೇಗೆ ಬರುತ್ತೆ ಎಂದು ತಿಳಿಯಲು ಮುಂದೆ ಓದಿ. 
ನಗರ ಪ್ರದೇಶಗಳಲ್ಲಿ ಪುರುಷರಿಗೆ ಮುಖದ ಕ್ಯಾನ್ಸರ್ ದಿನೇ ದಿನೇ ಹೆಚ್ಚುತ್ತಿದೆ. ಈ ಕುರಿತು ಚಿಂತಾಜನಕ ಸ್ಥೀತಿಯಲ್ಲಿ ವೈದ್ಯರು ಒಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಪುರುಷರು ಅಸ್ವಾಸ್ಥಕರವಾದ ರೀತಿಯಲ್ಲಿ ಓರಲ್‌ ಸೆಕ್ಸ್ ಮಾಡುವುದರಿಂದ ಸಾಂಕ್ರಾಮಿಕ ಪೊಪಿಲೊಮಾ ವೈರಸ್ (ಹೆಚ್‌ಪಿವಿ) ರೋಗಾಣುಗಳಿಂದ ಕ್ಯಾನ್ಸರ್‌ ಆಗುತ್ತದೆ ಎಂದು ವೈದ್ಯರು ಸಂಶೋಧನೆಯ ಮೂಲಕ ತಿಳಿಸಿದ್ದಾರೆ.
 
ಬಂಗಾಲದಲ್ಲಿ ಓರಲ್‌ ಸೆಕ್ಸ್‌ ದಿನೆ ದಿನೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ತಂಬಾಕು ಕೂಡ ಇದೆ. ಆದರೆ ಮಾನವ ಜನನಾಂಗದಲ್ಲಿ ಹೆಚ್‌ಪಿವಿ ವೈರಸ್ ಇರುವ ಕಾರಣ ಅಸುರಕ್ಷಿತ ಮತ್ತು ಅಸ್ಥವ್ಯಸ್ಥ ರೀತಿಯಲ್ಲಿ ಓರಲ್‌ ಸೆಕ್ಸ್ ಮಾಡುವುದರಿಂದ ಮುಖದ ಕ್ಯಾನ್ಸರ್‌ ಆಗುತ್ತದೆ " ಎಂದು ಚಿತ್ರರಂಜನ್‌ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (ಸಿಎನ್‌ಸಿಐ) ನಿರ್ದೇಶಕ ಜಯದೀಪ್ ವಿಶ್ವಾಸ್ ತಿಳಿಸಿದ್ದಾರೆ.
 
ಸಂಸ್ಥೆಯು ಮಾಡಿದ 2008-09 ನೇ ಸಾಲಿನಲ್ಲಿ ಸಂಶೋಧನೆಯ ಅನುಸಾರ ಕೊಲ್ಕತ್ತಾ ವಾಸಿಗಳಲ್ಲಿ ಕ್ಯಾನ್ಸರ್ ಬರುವ ಮುಖ್ಯ ಮೂರು ಕಾರಣಗಳಲ್ಲಿ ಓರಲ್‌ ಕ್ಯಾನ್ಸರ್ ಕೂಡ ಒಂದಾಗಿದೆ. ಈ ಅಧ್ಯಯನದ ವರದಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಮೂಲಗಳೂ ತಿಳಿಸಿವೆ. ಸಾಮಾನ್ಯವಾಗಿ ಕೊಲ್ಕತ್ತಾದ ಪುರುಷರಲ್ಲಿ ಆಗುವ ಕ್ಯಾನ್ಸರ್‌ನಲ್ಲಿ ಫೆಫಡೆ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್‌ ಆಗುತ್ತದೆ ಎಂದು ಅಧ್ಯಯನ ತಿಳಿಸಿದೆ. 
 
ಇನ್ನೊಂದು ಮುಖ್ಯ ವಿಷಯವೆಂದರೆ, 2006-07 ರಲ್ಲಿ ಸಿಎನ್‌ಸಿಐ ಅಡಿಯಲ್ಲಿ ಮಾಡಿದ ಸರ್ವೇಯಲ್ಲಿ ಪುರುಷರಿಗೆ ಆಗುವ ಕ್ಯಾನ್ಸರ್‌ನಲ್ಲಿ ಬಾಯಿಯ ಕ್ಯಾನ್ಸರ್‌ ಇರಲಿಲ್ಲ.ಆದರೆ ಈಗ ಮಾತ್ರ ಓರಲ್‌ ಸೆಕ್ಸ್‌ನಿಂದ ಮುಖದ ಕ್ಯಾನ್ಸರ್‌ ಆಗುತ್ತದೆ ಎಂದು ವರದಿ ತಿಳಿಸಿದೆ. 
 
ಸಾಮಾನ್ಯವಾಗಿ ನಮ್ಮ ಯುವಕರು ಆಧುನಿಕ ಯುಗದಲ್ಲಿ ವಿಚಿತ್ರ ವಿಚಿತ್ರ ಪ್ರಕಾರದಲ್ಲಿ ಸೆಕ್ಸ್‌ ಮಾಡುತ್ತಾರೆ. ಇದಕ್ಕೆಲ್ಲ ಕಾರಣ ನೀಲಿ ಚಿತ್ರಗಳೂ ನೊಡಿ ಯುವಕರು ಈ ತರಹದ ಓರಲ್‌ ಸೆಕ್ಸ್‌ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. 
 
ಯುವಕರೇ ಇನ್ನು ಮುಂದೆಯಾದರು ಸೆಕ್ಸ್‌ ಮಾಡುವಾಗ ಎಚ್ಚರದಿಂದ ಮಾಡಿ. ಇಲ್ಲದಿದ್ದರೆ ಓರಲ್‌ ಕ್ಯಾನ್ಸರ್‌ ಆದಿತು.ಎಚ್ಚರ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೆಚ್ಯೂರಿಟಿಯಲ್ಲಿ ಪುರುಷರಿಗಿಂತ ಮಹಿಳೆಯರೇ ಮೇಲು