ಕಿಸ್ ಮಾಡುವುದರ ಈ ಲಾಭ ನಿಮಗೆ ತಿಳಿದಿದೆಯೇ?!

ಶುಕ್ರವಾರ, 9 ನವೆಂಬರ್ 2018 (09:11 IST)
ಬೆಂಗಳೂರು: ಪ್ರೀತಿಯ ಹುಡುಗ/ಹುಡುಗಿಗೆ ನೀಡುವ ಒಂದು ಚುಂಬನ ನಮ್ಮ ದೇಹದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತದೆ ಗೊತ್ತಾ? ಹಾಗಿದ್ದರೆ ಇದನ್ನು ಓದಿ.

ನೋವು ಮಾಯ
ಕಿಸ್ ಮಾಡುವುದರಿಂದ ದೇಹ ಭಾಗಗಳ ನೋವು ಕಡಿಮೆಯಾಗುತ್ತದೆ! ಚುಂಬಿಸುವಾಗ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ನಿಂದ ಬೆನ್ನು ನೋವಿನಂತಹ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ ಎಂದು ಅಧ್ಯಯನಗಳಿಂದಲೇ ಸಾಬೀತಾಗಿದೆ.

ಒತ್ತಡ ಕಡಿಮೆ
ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಪ್ರೀತಿ ಪಾತ್ರರಿಗೆ ಒಂದು ಸುದೀರ್ಘ ಚುಂಬನ ಕೊಟ್ಟರೆ ಸಾಕು! ಇದು ಮೂಡ್ ಚೆನ್ನಾಗಿ ಮಾಡುತ್ತದೆ.

ಬಾಯಿಯೂ ಶುಚಿಯಾಗುತ್ತೆ!
ಒಂದು ಲಿಪ್ ಕಿಸ್ ನಿಂದ ಬಾಯಿಯಲ್ಲಿ ಹಲ್ಲು ಹುಳುಕಾಗಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಜೊಲ್ಲು ರಸ ಉತ್ಪತ್ತಿಯಾಗುತ್ತದೆ. ಪರಿಣಾಮ ಚುಂಬನದಿಂದ ಬಾಯಿ ಶುಚಿಯಾಗುತ್ತೆ!

ಅಲರ್ಜಿ ಲಕ್ಷಣಗಳು
ಸುಮಾರು 30 ನಿಮಿಷಗಳ ಕಾಲ ಒಂದು ದಿನದಲ್ಲಿ ಸಂಗಾತಿಗೆ ಚುಂಬಿಸುವುದರಿಂದ ನಮ್ಮ ದೇಹದಲ್ಲಿ ಅಲರ್ಜಿಕಾರಕ ಅಂಶಗಳು ಕಡಿಮೆಯಾಗುತ್ತದೆ ಎಂದು 2006 ರಲ್ಲಿ ಆರೋಗ್ಯ ಸಂಬಂಧಿ ಮ್ಯಾಗಜಿನ್ ಒಂದು ಪ್ರಕಟಿಸಿದ ಅಧ್ಯಯನ ವರದಿ ಹೇಳಿದೆ! ಮತ್ಯಾಕೆ ತಡ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗರ್ಭಿಣಿಯರು ಹುಣಸೆಹಣ್ಣು ತಿನ್ನವ ಮುನ್ನ ಎಚ್ಚರ