Select Your Language

Notifications

webdunia
webdunia
webdunia
webdunia

ಥೈರಾಯ್ಡ್ ಸಮಸ್ಯೆ ಇದೆಯಾ? ಇಲ್ಲಿದೆ ಪರಿಹಾರ

ಥೈರಾಯ್ಡ್ ಸಮಸ್ಯೆ ಇದೆಯಾ? ಇಲ್ಲಿದೆ ಪರಿಹಾರ
ಬೆಂಗಳೂರು , ಶನಿವಾರ, 19 ಫೆಬ್ರವರಿ 2022 (08:10 IST)
ನಮ್ಮ ದೇಹದಲ್ಲಿರುವ ಸೂಕ್ಷ್ಮ ಅಂಗಾಂಗಗಳಲ್ಲಿ ಥೈರಾಯ್ಡ್ ಗ್ರಂಥಿಯು  ಒಂದು. ಥೈರಾಯ್ಡ್ ಗ್ರಂಥಿಗೆ ಸ್ವಲ್ಪ ಏರುಪೇರು ಉಂಟಾದರೂ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತದೆ.

ಅನಾರೋಗ್ಯಕರ ಜೀವನ ಶೈಲಿಯನ್ನು ದೇಹಕ್ಕೆ ರೂಢಿಸಿಕೊಳ್ಳುವುದರಿಂದ ಈಗಿನ ಜನರು ಚಿಕ್ಕ ವಯಸ್ಸಿನಲ್ಲಿಯೇ ಥೈರಾಯ್ಡ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ನಿಗಾ ಇಟ್ಟು ಒತ್ತಡ ಕಡಿಮೆ ಮಾಡಿಕೊಂಡು, ಪೌಷ್ಟಿಕ ಆಹಾರಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಥೈರಾಯ್ಡ್ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಬಹುದು.

ಆಯುರ್ವೇದ ತಜ್ಞರು ಹೇಳುವ ಪ್ರಕಾರ ತೆಂಗಿನಕಾಯಿಯನ್ನು ಯಾವುದೇ ರೀತಿಯಲ್ಲಿ ದೇಹಕ್ಕೆ ಸೇವಿಸಬಹುದು- ತೆಂಗಿನಕಾಯಿಯ ಎಣ್ಣೆ, ತೆಂಗಿನಕಾಯಿ ನೀರು, ಚಟ್ನಿ, ತೆಂಗಿನಕಾಯಿ ಹಾಲು ಮತ್ತು ಬೆಲ್ಲದ ಉಂಡೆ ರೂಪದಲ್ಲಿ ಆಗಾಗ ಸೇವಿಸಬಹುದು.

ಹೀಗೆ ತೆಂಗಿನಕಾಯಿಯನ್ನು ಯಾವುದೇ ರೂಪದಲ್ಲಿ ನಿಮ್ಮ ಆಹಾರ ಪದಾರ್ಥಗಳೊಂದಿಗೆ ಸೇವಿಸಬಹುದು. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.

ಹಾಗಾದರೆ, ತೆಂಗಿನಕಾಯಿಯನ್ನು ಯಾವ ರೂಪದಲ್ಲಿ ಸೇವಿಸಬಹುದು, ಇದರಿಂದ ಯಾವೆಲ್ಲಾ ಉಪಯೋಗಗಳಿವೆ ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಆರೋಗ್ಯವನ್ನು ತೆಂಗಿನಕಾಯಿ ಹೇಗೆ ಕಾಪಾಡುತ್ತದೆ ನೋಡೋಣ.

ಇಷ್ಟೆಲ್ಲ ಉಪಯೋಗಗಳನ್ನು ಹೊಂದಿರುವ ತೆಂಗಿನಕಾಯಿಯನ್ನು ನಿಮ್ಮ ನಿತ್ಯ ಆಹಾರ ಶೈಲಿಯಲ್ಲಿ ಸೇರಿಸಿಕೊಳ್ಳಿ ಹಾಗೂ ಥೈರಾಯ್ಡ್ ಸಮಸ್ಯೆಗೆ ಗುಡ್ ಬೈ ಹೇಳಿ..


Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆಗೆ ತೆಂಗಿನ ಎಣ್ಣೆ ಆರೋಗ್ಯಕ್ಕೆ ಉತ್ತಮ