Daily Horoscope

Select Your Language

Notifications

webdunia
webdunia
webdunia
webdunia

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

Summer Health Tips
Photo Credit X
ರಾಜ್ಯದ ದಿನದಿಂದ ದಿನಕ್ಕೆ ಬೀಸಿಲ ಬೇಗೆ ಏರುತ್ತಲೇ ಇದೆ. ಈ ಸಮಯದಲ್ಲಿ ಹೆಚ್ಚು ಜ್ಯೂಸ್ ಹಾಗೂ ಪಾನೀಯಗಳನ್ನು ಸೇವಿಸಬೇಕೆನಿಸುತ್ತದೆ. ಆದರೆ ಫ್ರಿಡ್ಜ್‌ನಲ್ಲಿರುವ ಸಕ್ಕರೆಯನ್ನು ಬೆರೆಸಿರುವ ಪಾನೀಯಗಳನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ. 

ಇನ್ನೂ ಆರೋಗ್ಯದ ದೃಷ್ಟಿಯಿಂದ ಬೇಸಿಗೆಯ ಬಿಸಿಲಿನಲ್ಲಿ ಬೆಲ್ಲ ಮತ್ತು ನೀರು ಸೇವಿಸುವುದು ಕೇವಲ ಸಂಪ್ರದಾಯವಲ್ಲ, ಇದು ವಿಜ್ಞಾನಪೂರ್ವಕವಾಗಿ ದೇಹಕ್ಕೆ ತುಂಬಾ ಒಳ್ಳೆಯದು. ಬಿಸಿಲಿಗೆ ಇದು ಹೇಗೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ. 

ತ್ವರಿತ ಶಕ್ತಿ:  ಬಿಸಿಲಿನಲ್ಲಿ ಓಡಾಡಿದಾಗ ದೇಹ ಬೇಗನೆ ಸುಸ್ತಾಗುತ್ತದೆ. ಸಕ್ಕರೆಗಿಂತ ಬೆಲ್ಲದಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿರುತ್ತವೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ದಿಢೀರ್ ಏರಿಸದೆ, ದೀರ್ಘಕಾಲದವರೆಗೆ ನಿಮಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ದೇಹದ ಉಷ್ಣತೆ ನಿಯಂತ್ರಣ

ಬೆಲ್ಲ ಮತ್ತು ನೀರು ಸೇರಿ ದೇಹದಲ್ಲಿ ಕೂಲಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತವೆ. ಇದು ದೇಹದ ಆಂತರಿಕ ಉಷ್ಣತೆಯನ್ನು ಸಮತೋಲನದಲ್ಲಿಡಲು ಮತ್ತು ಹೀಟ್ ಸ್ಟ್ರೋಕ್ (ಬಿಸಿಲ ಹೊಡೆತ) ತಡೆಯಲು ಸಹಾಯ ಮಾಡುತ್ತದೆ.

ಎಲೆಕ್ಟ್ರೋಲೈಟ್ ಸಮತೋಲನ

ಬೆವರಿನ ಮೂಲಕ ದೇಹದಿಂದ ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಲವಣಗಳು ಹೊರಹೋಗುತ್ತವೆ. ಬೆಲ್ಲದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಮಟ್ಟವನ್ನು ಕಾಪಾಡಿ ನಿರ್ಜಲೀಕರಣ (Dehydration) ಆಗದಂತೆ ನೋಡಿಕೊಳ್ಳುತ್ತದೆ.
ಬಿಸಿಲಿನಲ್ಲಿ ಸೇವಿಸುವ ಉತ್ತಮ ವಿಧಾನ:


Share this Story:

Follow Webdunia kannada

ಮುಂದಿನ ಸುದ್ದಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ