Publish Date: Sat, 21 Feb 2026 (12:48 IST)
Updated Date: Sat, 21 Feb 2026 (12:51 IST)
ಲೋ ಶುಗರ್ ಸಮಸ್ಯೆಯಾದಾಗ ಹಲವರು ಚಾಕಲೇಟ್ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಚಾಕಲೇಟ್ ಸೇವನೆ ಮಾಡುವುದು ಉತ್ತಮ ಆಯ್ಕೆಯೇ? ಇದನ್ನು ತಪ್ಪದೇ ಓದಿ.
ಲೋ ಶುಗರ್ ಆದಾಗ ತಲೆ ಸುತ್ತಿ ಬರುವುದು, ಪ್ರಜ್ಞಾಹೀನನಾಗುವ ಸ್ಥಿತಿಯೂ ಎದುರಾಗುತ್ತದೆ. ಕೆಲವೊಮ್ಮೆ ಲೋ ಶುಗರ್ ಸಡನ್ ಆಗಿ ಬರುವುದರಿಂದ ಪ್ರಾಣಕ್ಕೂ ಅಪಾಯವಿದೆ. ಲೋ ಶುಗರ್ ಆದಾಗ ಚಾಕಲೇಟ್ ತಿನ್ನುವುದರಿಂದ ಒಳಿತು ಮತ್ತು ಕೆಡುಕು ಎರಡೂ ಇದೆ.
ಲೋ ಶುಗರ್ ನಿಂದಾಗಿ ಇದ್ದಕ್ಕಿದ್ದಂತೆ ತಲೆ ಸುತ್ತಿದಂತಾಗುತ್ತಿದ್ದರೆ ಚಾಕಲೇಟ್ ತಿನ್ನುವುದು ಉತ್ತಮ ಆಯ್ಕೆಯಲ್ಲ. ಯಾಕೆಂದರೆ ಚಾಕಲೇಟ್ ನಲ್ಲಿ ಅತ್ಯಧಿಕ ಕೊಬ್ಬು ಇರುತ್ತದೆ. ಇದು ಸಕ್ಕರೆ ಪ್ರಮಾಣ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ತಲೆಸುತ್ತಿ ಬರುತ್ತಿದ್ದರೆ ತಕ್ಷಣವೇ ಜೇನು ತುಪ್ಪ, ಗ್ಲುಕೋಸ್, ಹಣ್ಣಿನ ರಸವನ್ನು ಸೇವಿಸಿ 10 ನಿಮಿಷದ ನಂತರ ಚಾಕಲೇಟ್ ಸೇವಿಸಬಹುದು. ಆದರೆ ನಿಮಗೆ ಲೋ ಶುಗರ್ ಇದ್ದು ಯಾವುದೇ ಲಕ್ಷಣಗಳಿಲ್ಲದೇ ಇದ್ದಾಗ ಚಾಕಲೇಟ್ ಸೇವಿಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ.