Select Your Language

Notifications

webdunia
webdunia
webdunia
webdunia

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬೆಲ್ಲ!

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬೆಲ್ಲ!
ಮೈಸೂರು , ಬುಧವಾರ, 15 ಡಿಸೆಂಬರ್ 2021 (10:45 IST)
ಪ್ರತಿದಿನ ಬೆಳಗ್ಗೆ ಸ್ವಲ್ಪವಾದರೂ ಬೆಲ್ಲ ತಿನ್ನಬೇಕು ಎನ್ನುವುದು ಮಲೆನಾಡಿನಲ್ಲಿ ಚಾಲ್ತಿಯಲ್ಲಿರುವ ಅಲಿಖಿತ ನಿಯಮ. ಮಕ್ಕಳಿಗಂತೂ ಕಡ್ಡಾಯವಾಗಿ ಬೆಲ್ಲ ನೀಡಲಾಗುತ್ತದೆ.
 
ಜೋನಿಬೆಲ್ಲದೊಂದಿಗೆ ತುಪ್ಪ  ಸೇರಿಸಿ ತಿನ್ನುವುದು ಮಜವೇ ಮಜ. ಅದರ ಮುಂದೆ ಬೇರ್ಯಾವ ಸಿಹಿಯೂ ಇಲ್ಲ. ಅಷ್ಟು ಖುಷಿ ಸಿಗುತ್ತದೆ. ಕೇವಲ ಖುಷಿ ಮಾತ್ರವಲ್ಲ. ಬೆಲ್ಲದಿಂದ ದೇಹಕ್ಕೆ ಸದೃಢತೆಯೂ ದೊರೆಯುತ್ತದೆ. ಸಕ್ಕರೆಯ ಸಿಹಿ ದೇಹಕ್ಕೆ ಒಳ್ಳೆಯದಲ್ಲ. ಬದಲಿಗೆ ಬೆಲ್ಲ ತಿನ್ನುವುದು ಅತಿ ಉತ್ತಮ.

ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ ತಂಪು ನೀಡುತ್ತದೆ. ಬೆಲ್ಲದೊಂದಿಗೆ ಚೂರು ನೀರು ಬೆರೆಸಿ, ಲಿಂಬೆರಸ  ಸೇರಿಸಿ, ಪಾನಕ ಮಾಡಿ ಸೇವಿಸುವುದೂ ಇದೆ. ಇನ್ನು, ಸಾಂಬಾರಿಗೂ ಸ್ವಲ್ಪ ಬೆಲ್ಲ, ಪಲ್ಯಕ್ಕೂ ಬೆಲ್ಲ ಸೇರಿಸುವ ಅಭ್ಯಾಸವಂತೂ ಹಲವೆಡೆ ಇದೆ. ಇದೆಲ್ಲ ಸುಮ್ಮನೆ ಬಾಯಿರುಚಿಗಲ್ಲ.
ಲಿವರ್ 

ನಾವು ದಿನವೂ ಏನೇನೋ ತಿನ್ನುತ್ತಿರುತ್ತೇವೆ. ಕಂಡಿದ್ದನ್ನೆಲ್ಲ ರುಚಿ ನೋಲಿ ನಲಿಯುತ್ತೇವೆ. ಆದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಲಿವರ್ ಗೆ ಇರಬೇಕಲ್ಲವೇ? ನಮ್ಮ ಲಿವರ್ ಅರ್ಥಾತ್ ಯಕೃತ್ ನಲ್ಲಿ ನಾವು ಸೇವಿಸುವ ಆಹಾರದಿಂದ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ.
ಪಚನಶಕ್ತಿ 

ಬೆಲ್ಲದಿಂದ ಪಚನಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಬೆಲ್ಲದಿಂದ ಮಲಬದ್ಧತೆಯೂ ದೂರವಾಗುತ್ತದೆ. ಪಚನಗೊಳಿಸುವ ಪ್ರಕ್ರಿಯೆಗೆ ಪುರಕವಾಗಿರುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿ, ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಇಮ್ಯೂನಿಟಿ 

ನೀವು ಎಂಥದ್ದೇ ಕಷಾಯ ಮಾಡಿ. ಅದಕ್ಕೆ ಬೆಲ್ಲ ಸೇರಿಸಿಕೊಳ್ಳದೆ ರುಚಿ ಬರುವುದಿಲ್ಲ. ಅಷ್ಟಕ್ಕೂ ಬೆಲ್ಲ ಸೇರಿಸುವುದು ರುಚಿಗೆ ಮಾತ್ರವೇ ಅಲ್ಲ. ಬೆಲ್ಲದಲ್ಲಿ ಸತು ಮತ್ತು ಸೆಲೆನಿಯಂ ಖನಿಜಾಂಶವಿರುತ್ತದೆ. ಇವು ಸೋಂಕುಗಳ ವಿರುದ್ಧ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ರಕ್ತ ಶುದ್ಧಿ

ನಿತ್ಯವೂ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಆದರೆ, ಬೆಲ್ಲ ಕೂಡ ಶುದ್ಧವಾಗಿರಬೇಕು. ಯಾವುದೇ ಕೆಟ್ಟ ಅಂಶ ಬೆರೆತಿರದ ಉತ್ತಮ ಬೆಲ್ಲ ಆರೋಗ್ಯಕ್ಕೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಎಷ್ಟು ಮುಖ್ಯ?