Select Your Language

Notifications

webdunia
webdunia
webdunia
webdunia

ಬೆಣ್ಣೆ ಅಥವಾ ಚೀಸ್ ನಲ್ಲಿ, ಆರೋಗ್ಯಕ್ಕೆ ಯಾವುದು ಉತ್ತಮ?

ಬೆಣ್ಣೆ ಅಥವಾ ಚೀಸ್ ನಲ್ಲಿ, ಆರೋಗ್ಯಕ್ಕೆ ಯಾವುದು ಉತ್ತಮ?
ಮೈಸೂರು , ಗುರುವಾರ, 30 ಡಿಸೆಂಬರ್ 2021 (12:00 IST)
ಹಾಲಿನ ಉತ್ಪನ್ನಗಳಾದ ಇವೆರಡೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರಿಗೆ ತಿಳಿದಿದ್ದರೂ, ಇದರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ.
 
ಬೆಣ್ಣೆ ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರ ಮೃದುತ್ವ, ಪರಿಮಳ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುತ್ತದೆ. ಹೀಗಾಗಿಯೇ ಇದನ್ನು ಇತರ ಹಲವು ಆಹಾರ ಪದಾರ್ಥಗಳೊಂದಿಗೆ ಸೇರಿಸಿ ತಿನ್ನುತ್ತಾರೆ.

ಬಿಸಿ ರೊಟ್ಟಿ, ಪರೋಟ, ಬಿಸಿಬೇಳೆ ಬಾತ್ ಮೊದಲಾದವುಗಳ ಮೇಲೆ ಬೆಣ್ಣೆಯನ್ನು ಹಾಕಿ ಸವಿಯುತ್ತಾರೆ. ಹಾಲಿನ ಉತ್ಪನ್ನವಾಗಿರುವ ಬೆಣ್ಣೆ ಆರೋಗ್ಯಕ್ಕೂ ಉತ್ತಮವಾಗಿರುವ ಕಾರಣ ದಿನನಿತ್ಯದ ಆಹಾರದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಾಲಿನೊಂದಿಗೆ ತಯಾರಿಸಲಾದ ಬೆಣ್ಣೆ ಮತ್ತು ಚೀಸ್ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಪೌಷ್ಟಿಕತಜ್ಞರು ಮತ್ತು ವೈದ್ಯರು ಶಿಫಾರಸು ಮಾಡುತ್ತಾರೆ.

ಹಾಲನ್ನು ಮೊಸರು ಮಾಡಿ, ಮೊಸರಿನಿಂದ ಬೆಣ್ಣೆಯನ್ನು ತೆಗೆಯಲಾಗುತ್ತದೆ. ಬೆಣ್ಣೆ ಆರೋಗ್ಯಕರ ಕೊಬ್ಬಿನ ಪ್ರಮಾಣವನ್ನು ಹೊಂದಿದ್ದು, ಇದು ಮೂಳೆಗಳನ್ನು ಬಲಪಡಿಸಲು ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಚೀಸ್ ಎಂದರೆ ಘನೀಕೃತ ಮೊಸರು ಎಂದು ಸುಲಭವಾಗಿ ಹೇಳಬಹುದು. ಆದರೆ, ಇದು ಸಂಸ್ಕರಿತ ಡೈರಿ ಉತ್ಪನ್ನವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿದೆ ಎಂದು ಭಾವಿಸಿ ಹಲವರು ಇದನ್ನು ತಿನ್ನುವುದಿಲ್ಲ. ಕೆಲವರಿಗೆ ಹುಳಿಮಿಶ್ರಿತವಾಗಿರುವ ಇದರ ರುಚಿ ಹಿಡಿಸುವುದಿಲ್ಲ. ಆದರೆ ಎಲ್ಲಾ ಬಗ್ಗೆಯ ಚೀಸ್ಗಳು ಆರೋಗ್ಯಕ್ಕೆ ಹಾನಿಕರವಲ್ಲ.

ಹಾಲಿನ ಉತ್ಪನ್ನವಾಗಿರುವ ಬೆಣ್ಣೆ ಅಥವಾ ಚೀಸ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ನ್ಯೂಟ್ರಿಷಿಯನ್ಗಳು ಸಲಹೆ ನೀಡುತ್ತಾರೆ. ಹೀಗಿದ್ದೂ ಬೆಣ್ಣೆ ಅಥವಾ ಚೀಸ್ನಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ.

ಬೆಣ್ಣೆ ಪ್ರೊಟೀನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು, ವಿಟಮಿನ್  ಡಿ ಮತ್ತು ಎಯಿಂದ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಚಯಾಪಚಯ ಪ್ರಕ್ರಿಯೆ ಸುಗಮವಾಗಿ ನಡೆಯಲು ನೆರವಾಗುತ್ತದೆ. ಆದರೆ, ಅಧ್ಯಯನವೊಂದರ ಪ್ರಕಾರ, ಚೀಸ್ನಲ್ಲಿ ಬಟರ್ಗಿಂತ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಅಂಶಗಳಿವೆ ಎಂಬುದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸುವವರು ಎಚ್ಚರ!