Publish Date: Fri, 06 Nov 2020 (06:13 IST)
Updated Date: Fri, 06 Nov 2020 (06:14 IST)
ಬೆಂಗಳೂರು : ನಮ್ಮ ದೇಹದ ಒಳಗಿನ ಸಮಸ್ಯೆ ಬಗ್ಗೆ ದೇಹದ ಹೊರಗಿನ ಅಂಗಾಂಗಗಳು ತಿಳಿಸುತ್ತವೆ. ಆ ಮೂಲಕ ನಾವು ಅದನ್ನು ತಿಳಿದುಕೊಳ‍್ಳಬಹುದು. ಅದರಂತೆ ಕೆಲವರು ಕೈ ಉಗುರುಗಳು ಸಿಪ್ಪೆ ಸುಲಿಯುತ್ತದೆ. ಇದರಿಂದ ನಿಮಗೆ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಳ್ಳಿ.
ಉಗುರು ಸಿಪ್ಪೆ ಸುಲಿದರೆ ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿರಬಹುದು. ಇಲ್ಲವಾದರೆ ನಿಮಗೆ ಥೈರಾಯ್ಡ್ ಸಮಸ್ಯೆ ಇರುವುದನ್ನು ಸೂಚಿಸುತ್ತದೆ. ಇದರಿಂದ ಕೆಲವೊಮ್ಮೆ ಉಗುರು ಬಿರುಕು ಬಿಡುತ್ತದೆ. ಇದಕ್ಕೆ ಕಾರಣ ವಿಟಮಿನ್ ಕೊರತೆ. ಆದಕಾರಣ ನಿಮಗೆ ಥೈರಾಯ್ಡ್ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲವಾದರೆ ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಯಕ್ತ ಪದಾರ್ಥಗಳನ್ನು ಸೇರಿಸಿಕೊಳ್ಳಿ.