ದಂಪತಿಗಳು ಪ್ರತ್ಯೇಕವಾಗಿ ಮಲಗಿದರೆ ಸಂಬಂಧ ಅನ್ಯೋನ್ಯವಾಗಿರುತ್ತದೆಯಂತೆ

Webdunia
ಬುಧವಾರ, 29 ಮೇ 2019 (06:57 IST)
ಬೆಂಗಳೂರು : ದಂಪತಿಗಳು ಬೇರೆ ಬೇರೆಯಾಗಿ ಮಲಗಿದರೆ ಅವರು ಜೀವನದಲ್ಲಿ ಯಾವುದೇ ಜಗಳ, ಗಲಾಟೆ ಇಲ್ಲದೆ ಅನ್ಯೋನ್ಯವಾಗಿರುತ್ತಾರೆ ಎಂದು  ಅಧ್ಯಯನವೊಂದರಿಂದ ತಿಳಿದುಬಂದಿದೆ.




ಹೌದು. ಒಂದೇ ಬೆಡ್‌ ನಲ್ಲಿ ಪತಿ ಹಾಗೂ ಪತ್ನಿ ಮಲಗಿದರೆ ಅವರು ಅನ್ಯೋನ್ಯವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಪ್ರತ್ಯೇಕವಾಗಿ ಮಲಗುವ ಸಂಗಾತಿಗಳ ವೈವಾಹಿಕ ಜೀವನ ಹೆಚ್ಚು ಸುಖಮಯವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.


ಟೊರೊಂಟೊದ ರಾಯರ್ಸನ್ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ- ಶೇ.30 ರಿಂದ 40 ರಷ್ಟು ಸಂಗಾತಿಗಳು ರಾತ್ರಿ ಪ್ರತ್ಯೇಕವಾಗಿ ಮಲಗುತ್ತಾರೆ ಹಾಗೂ ಇದು ಅವರ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಅಚ್ಚರಿಯ ವಿಷಯ ಬಹಿರಂಗವಾಗಿದೆ.


ರಾತ್ರಿ ದಂಪತಿಗಳು ಒಂದೇ ಬೆಡ್ ನಲ್ಲಿ ಮಲಗಿ ಶೃಂಗಾರದಲ್ಲಿ ತೊಡಗುವುದರಿಂದ ನಿದ್ರೆ ಮಾಡಲು ಆಗುವುದಿಲ್ಲ. ಪ್ರತ್ಯೇಕ ಮಲಗುವುದರಿಂದ ರಾತ್ರಿ ಸುಖವಾದ ನಿದ್ರೆ ಮಾಡಲು ಸಾಧ್ಯ. ಇದರಿಂದ ಇಬ್ಬರ ಮೂಡ್ ದಿನವಿಡೀ ಚೆನ್ನಾಗಿರುತ್ತದೆ ಹಾಗೂ ಇದು ಸಂಬಂಧದಲ್ಲಿ ಮತ್ತಷ್ಟು ಅನ್ಯೋನ್ಯತೆ ತರುತ್ತದೆ ಎನ್ನುತ್ತಾರೆ ತಜ್ಞರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments