ಪ್ರೇಯಸಿಯ ಈ ವರ್ತನೆ ನನಗ್ಯಾಕೋ ಸರಿ ಕಾಣುತ್ತಿಲ್ಲ!

ಶನಿವಾರ, 9 ನವೆಂಬರ್ 2019 (14:27 IST)
ಬೆಂಗಳೂರು: ನನಗೆ 32 ವರ್ಷ. ನನ್ನ ಸಹೋದ್ಯೋಗಿಯನ್ನು ಇಷ್ಟಪಡುತ್ತಿದ್ದೇನೆ. ಅವಳಿಗೆ ಈಗಾಗಲೇ  ಬಾಯ್ ಫ್ರೆಂಡ್  ಇದ್ದಾನೆ. ಆದರೆ ಅವರಿಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ. ಅವಳು ಕೂಡ ನನ್ನನ್ನು ಇಷ್ಟಪಡುತ್ತಿದ್ದಾಳೆ. ನನ್ನ ಜತೆಗೆ ಇರುವಾಗ ಅವಳು ಬಹಳ ಸಂತಸದಿಂದ ಇರುತ್ತಾಳೆ. ಆದರೆ ಅವಳ ಬಾಯ್ ಫ್ರೆಂಡ್ ಅವಳನ್ನು ಬಿಟ್ಟುಬಿಡುತ್ತಿಲ್ಲ. ಅವಳು ಕೂಡ ಮೊದಲಿನಂತೆ ಅವನೊಂದಿಗೆ ಮಾತನಾಡುತ್ತಿದ್ದಾಳೆ. ನಿನ್ನ  ಮೇಲೆ ಪ್ರೀತಿ ಇದೆ. ನೀನೇ ಜಗತ್ತು ಎಂದು ಹೇಳುತ್ತಾಳೆ. ಇದೇ ಮಾತನ್ನು ನನಗೂ ಕೂಡ ಹೇಳುತ್ತಾಳೆ. ನನ್ನೊಂದಿಗಿಂತ ಅವನೊಂದಿಗೆ ಜಾಸ್ತಿ ಮಾಡುತ್ತಾಳೆ. ನನಗೆ ಅವಳ ಬಗ್ಗೆ ಅರ್ಥ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ ಏನು ಮಾಡಲಿ. 
ನಿಮ್ಮ ಪರಿಸ್ಥಿತಿ ಬಗ್ಗೆ ನನಗೆ ಅರ್ಥವಾಗುತ್ತದೆ. ಈ ಕುರಿತು ನೀವು ಅವಳೊಂದಿಗೆ ನೇರವಾಗಿ ಚರ್ಚೆ ಮಾಡಿ. ನಿಮ್ಮ ಸಂಬಂಧದ ಬಗ್ಗೆ ಒಂದು ಸರಿಯಾದ ನಿರ್ಧಾರದ ಬಗ್ಗೆ ಕೇಳಿ. ಅವಳು ನಿಮಗಿಂತ ಜಾಸ್ತಿ ಮೊದಲಿನ ಬಾಯ್ ಫ್ರೆಂಡ್ ಜತೆ ಮಾತನಾಡುತ್ತಿದ್ದರೆ ಅವಳಿಗೆ ಅವನ ಮೇಲೆಯೇ ಜಾಸ್ತಿ ಪ್ರೀತಿ ಇದ್ದ ಹಾಗೇ ಇದೆ. ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಯಸ್ಸು ಕಳೆದಂತೆ ನನ್ನ ಗುಪ್ತಾಂಗದ ಗಾತ್ರ ದೊಡ್ಡದಾಗುತ್ತದೆಯೇ?