Webdunia - Bharat's app for daily news and videos

Install App

ಹುಚ್ಚು ನಾಯಿ ಕಡಿತಕ್ಕೆ ಈ ರೀತಿಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ರೇಬಿಸ್ ರೋಗದಿಂದ ಪಾರಾಗಿ

Webdunia
ಬುಧವಾರ, 7 ಫೆಬ್ರವರಿ 2018 (06:32 IST)
ಬೆಂಗಳೂರು : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ಹಾಲು ತಂದು ಕೊಡುವವರಿಗೆ ನಾಯಿ ಕಚ್ಚುವುದು ಅಪರೂಪವಲ್ಲ. ಸರಿಯಾದ ವಿಧಾನದಲ್ಲಿ ನೀಡಿದ ಪ್ರಥಮ ಚಿಕಿತ್ಸೆಯಿಂದ ರೇಬಿಸ್ ಬರುವ ಸಾಧ್ಯತೆಯನ್ನು ಶೇ.80 ರಷ್ಟು ಕಡಿಮೆ ಮಾಡಬಹುದು. ಅದು ಹೀಗಿದೆ.


*ಪ್ರಥಮ ಚಿಕಿತ್ಸೆಯನ್ನು ಪ್ರಾಣಿ ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆರಂಭಿಸಬೇಕು. ಪ್ರಾಣಿ ಕಚ್ಚಿದ ಸ್ಥಳವನ್ನು ನಲ್ಲಿ ನೀರಿನ ಧಾರೆಯ ಕೆಳಗಿಡಬೇಕು. ವೇಗವಾಗಿ ನೀರನ್ನು ಬಿಡಬೇಕು. ನೀರಿನಧಾರೆ ನೇರವಾಗಿ ಗಾಯದ ಮೇಲೆ ಬೀಳುವಂತಿರಬೇಕು. ಯಾವುದೇ ಸೋಪು ಸಿಕ್ಕರೂ ಸರಿ, ಅದನ್ನು ಗಾಯದ ಮೇಲೆ ಉಜ್ಜಿ ತೊಳೆಯುತ್ತಾ ಇರಬೇಕು. ನಲ್ಲಿಯಲ್ಲಿ ನೀರು ಬರದಿರಬಹುದಾದಂತಹ ಸಂದರ್ಭದಲ್ಲಿ ನೀರನ್ನು ಚಿಮ್ಮಬಲ್ಲ ಯಾವುದೆ ಸಾಧನವನ್ನು ಬಳಸಬೇಕಾಗುತ್ತದೆ. ಸಿರಿಂಜು, ಪಿಚಕಾರಿ, ನೀರಿನ ಪೈಪು ಇತ್ಯಾದಿ.
*ಗಾಯಕ್ಕೆ ಸರ್ಜಿಕಲ್ ಸ್ಪಿರಿಟ್, ಟಿಂಕ್ಚರ್ ಅಯೋಡಿನ್, ಪೊವಿಡೋನ್ ಅಯೋಡಿನ್ ಮುಂತಾದವನ್ನು ಹಚ್ಚಬೇಕಾಗುತ್ತದೆ. ಈ ಔಷಧಗಳು ರೇಬಿಸ್ ವೈರಸ್ಸನ್ನು ಸಾಯಿಸಬಲ್ಲವು. ಇವು ಸಿಗದಿದ್ದಲ್ಲಿ ಬ್ರಾಂಡಿ, ವಿಸ್ಕಿ, ರಮ್ ಗಳಿಂದಲೂ ಗಾಯವನ್ನು ತೊಳೆಯಬಹುದು. ಪಟ್ಟಿ ಕಟ್ಟಿಸಬೇಡಿ. ಧೂಳು ಬೀಳದಂತೆ ಬಟ್ಟೆ ಮುಚ್ಚಿ. ಕೂಡಲೇ ವೈದ್ಯರ ಹತ್ತಿರ ಕರೆದೊಯ್ಯಿರಿ. ಗಾಯವನ್ನು ಸರಿಯಾಗಿ ತೊಳೆದು, ವೈದ್ಯರ ಸಲಹೆಯಂತೆ ಲಸಿಕೆ / ಆಂಟಿ ರೇಬಿಕ್ ಸೀರಮ್ ತೆಗೆದುಕೊಂಡರೆ ರೇಬಿಸ್ಸಿನಿಂದ ಪಾರಾಗುವುದು ಕಷ್ಟವಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments