Publish Date: Wed, 11 Mar 2026 (12:39 IST)
Updated Date: Wed, 11 Mar 2026 (12:44 IST)
ಊಟ ರುಚಿಯಾಗಬೇಕಾದರೆ ಉಪ್ಪು ಬೇಕೇ ಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಉಪ್ಪು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ದಿನಕ್ಕೆ ಎಷ್ಟು ಉಪ್ಪು ಸೇವನೆ ಮಾಡಬಹುದು ಇಲ್ಲಿದೆ ನೋಡಿ ವಿವರ.
ಉಪ್ಪು ರುಚಿಗೆ ತಕ್ಕ ಇರಲೇಬೇಕು. ಆದರೆ ಉಪ್ಪು ಮಿತಿ ಮೀರಿ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗುವ ಅಪಾಯವಿದೆ. ಇದರಿಂದ ಕಿಡ್ನಿ ಸ್ಟೋನ್ ನಂತಹ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು.
ಅತಿಯಾದ ಉಪ್ಪು ಸೇವನೆ ರಕ್ತದೊತ್ತಡ ಹೆಚ್ಚಲೂ ಕಾರಣವಾಗುತ್ತದೆ. ಸಹಜವಾಗಿಯೇ ಇದು ಹೃದಯದ ಸಮಸ್ಯೆಗೆ ದಾರಿಯಾಗಬಹುದು. ಆಹಾರದಲ್ಲಿ ಸಮತೋಲನ ಮತ್ತು ನಿಯಂತ್ರಣವಿರಬೇಕೆಂದರೆ ಕಡಿಮೆ ಉಪ್ಪು ಸೇವನೆ ಮಾಡಿದರೆ ಉತ್ತಮ.
ಒಬ್ಬ ವ್ಯಕ್ತಿಯು ದಿನಕ್ಕೆ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವನೆ ಮಾಡಬಾರದು ಎನ್ನುತ್ತಾರೆ ತಜ್ಞರು. 5 ಗ್ರಾಂ ಉಪ್ಪು ಎಂದರೆ ಒಂದು ಟೇಬಲ್ ಸ್ಪೂನ್ ನಲ್ಲಿ ಹದವಾದ ಅಳತೆಯಾಗಿದೆ. ಅದರಲ್ಲೂ 4 ರಿಂದ 6 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ 3 ಗ್ರಾಂಗಿಂತ ಹೆಚ್ಚು ಉಪ್ಪು ಕೊಡಬಾರದು. 1-3 ವರ್ಷದೊಳಗಿನ ಮಕ್ಕಳಿಗೆ 2 ಗ್ರಾಂ ಮೀರಬಾರದು. 7-10 ವರ್ಷದೊಳಗಿನ ಮಕ್ಕಳಿಗೆ ಹೆಚ್ಚೆಂದರೆ 5 ಗ್ರಾಂ ಉಪ್ಪು ನೀಡಬಹುದು ಎನ್ನುತ್ತಾರೆ ತಜ್ಞರು.