Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೆ ಅಲೋವೆರಾ ಜ್ಯೂಸ್ ಎಷ್ಟು ಪ್ರಯೋಜನ?

ಆರೋಗ್ಯಕ್ಕೆ ಅಲೋವೆರಾ ಜ್ಯೂಸ್ ಎಷ್ಟು ಪ್ರಯೋಜನ?
ಬೆಂಗಳೂರು , ಗುರುವಾರ, 20 ಜನವರಿ 2022 (21:16 IST)
ಅಲೋವೆರಾ ಗಿಡ ಎಲ್ಲರ ಮನೆ ಅಂಗಳದಲ್ಲೂ ಇರುತ್ತೆ ಆದ್ರೆ ಪ್ರಯೋಜನ ಮಾತ್ರ ಹಲವರಿಗೆ ತಿಳಿದಿಲ್ಲ.

ಅಲೋವೆರಾವನ್ನು ಆರೋಗ್ಯಕರ ಚರ್ಮಕ್ಕೆ ಸಾಂಪ್ರದಾಯಿಕ ಮನೆಮದ್ದು ಅಂತಾನೆ ಪರಿಗಣಿಸಲಾಗುತ್ತೆ.  ಸಣ್ಣ-ಪುಟ್ಟ ಸುಟ್ಟಗಾಯಗಳಿಗೆ ನಿರಂತರವಾಗಿ ಅಲೋವೆರಾ ಹಚ್ಚುವುದರಿಂದ ಗಾಯ ಮಾಯವಾಗುತ್ತೆ.

ಚರ್ಮಕ್ಕೆ ಹೊರತುಪಡಿಸಿ ಆರೋಗ್ಯಕ್ಕೂ ಆಲೋವೆರಾ ಸೂಪರ್ ಮೆಡಿಸನ್ ಆಗಿದೆ. ಹೀಗಾಗಿ ಹಲವು ಪೌಷ್ಠಿಕತಜ್ಞರು ಅಲೋವೆರಾ ಜ್ಯೂಸ್ ಕುಡಿಯುವಂತೆ ಸಲಹೆ ನೀಡ್ತಾರೆ.
ಸಾಮಾನ್ಯವಾಗಿ ಎಲ್ಲರೂ ಸನ್ಬರ್ನ್ ಚಿಕಿತ್ಸೆಗೆ ಅಲೋವೆರಾ ಉಪಯೋಗಿಸ್ತಾರೆ. ಆದ್ರೆ ಉತ್ತಮ ಆರೋಗ್ಯ ಹೊಂದಲು ಸಹ ನಾವು ಆಲೋವೆರಾ ಬಳಸಬಹುದು. ಶೀತ, ಕೆಮ್ಮಿಗೆ ಆಲೋವೆರಾ ಜ್ಯೂಸ್ ಮಾಡಿ ಕುಡಿದ್ರೆ ಕ್ರಮಣ ಶೀತ, ಕೆಮ್ಮು ಕಡಿಮೆಯಾಗುತ್ತೆ.
ಅಲೋವೆರಾ ಜ್ಯೂಸ್ ವಿಟಮಿನ್, ಮಿನೆರಲ್ಸ್ ಆಂಟಿಆಕ್ಸಿಡೆಂಟ್ ಹೊಂದಿದೆ. ದೇಹದಲ್ಲಿ ಟಾಕ್ಸಿನ್ಗಳನ್ನು ಹೊರಹಾಕಿ ಶುದ್ಧೀಕರಿಸುತ್ತೆ. ಉತ್ತಮ ಫಲಿತಾಂಶಕ್ಕಾಗಿ ತಜ್ಞರು ಇದನ್ನು ಬೆಳಗ್ಗೆ ಬೇಗನೆ ಸೇವಿಸಲು ಸೂಚಿಸುತ್ತಾರೆ. ನೀವು ಇದನ್ನು ಅಮ್ಲಾ ಹಾಗೂ ತುಳಿಸಿ ರಸದೊಂದಿಗೆ ಸೇರಿಸಿ ಕುಡಿಯಬಹುದಾಗಿದೆ.

ಜೀರ್ಣಕ್ರಿಯೆ

ಅಲೋವೆರಾ ಜ್ಯೂಸ್ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಒಮ್ಮೆ ಅಲೋವೆರಾ ಜ್ಯೂಸ್ ಕುಡಿಯಿರಿ. ಅಸಿಡಿಟಿ ದೂರವಾಗುತ್ತೆ. ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಬಹುದು.

ತೂಕ

ತೂಕ ಇಳಿಸಲು ಅಲೋವೆರಾ ಜ್ಯೂಸ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ. ಜೀರ್ಣಕ್ರಿಯೆ ಸಮಸ್ಯೆಯನ್ನು ಸರಾಗಗೊಳಿಸುತ್ತೆ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದ್ರೆ ವೇಗವಾಗಿ ತೂಕ ಇಳಿಕೆ ಮಾಡಬಹುದು.

 
ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ ಮಧುಮೇಹಿಗಳಿಗೆ ಹೆಚ್ಚು ಸಹಕಾರಿ ಅಂತ ಸಂಶೋಧನೆಯೇ ತಿಳಿಸಿದೆ. ಈ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

ಮಧುಮೇಹ ಹಾಗೂ ಹೈಪರ್ಲಿಪಡೆಮಿಯಾ ರೋಗಿಗಳಲ್ಲಿ ಲಿಪಿಡ್ಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಜ್ಞರೇ ತಿಳಿಸಿದ್ದಾರೆ. ಗರ್ಭಿಣಿಯರಿಗೆ ಇದನ್ನು ಶಿಫಾರಸು ಮಾಡುವುದಿಲ್ಲ.

ಉತ್ತಮ ಆರೋಗ್ಯ ಹೊಂದಲು ಇಷ್ಟೊಂದು ಉಪಕಾರಿಯಾಗಿರೋ ಅಲೋವೆರಾ ಜ್ಯೂಸ್ ಮಾಡೋದು ಹೇಗೆ ಅಂತ ಹೇಳ್ತಿವಿ ನೋಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸದಾ ಖುಷಿಯಾಗಿರಲು ಏನ್ ಮಾಡ್ಬೇಕು? ಈ ನಿಯಮಗಳನ್ನು ಪಾಲಿಸಿ