ಮುಂಬೈ: ಇದೇ 25ರಂದು ದೇಶದಾದ್ಯಂತ ಹೋಳಿ ಹಬ್ಬ ಆಚರಿಸಲು ಮಕ್ಕಳಿಂದ ಹಿಡಿದು ದೊಡ್ಡರವರೆಗೂ ತುಂಬಾನೇ ಉತ್ಸುಹಕರಾಗಿದ್ದಾರೆ. ಹಬ್ಬದ ಮಧ್ಯೆ ನಮ್ಮ ಆರೋಗ್ಯದ ಬಗ್ಗೆನೂ ಕಾಳಜಿ ವಹಿಸುವುದು ತುಂಬಾನೇ ಮುಖ್ಯ. ಹೋಳಿ ಹಬ್ಬದ ವೇಳೆ ಕ್ಷಣದ ಸಂತೋಷಕ್ಕಾಗಿ ಜೀವನ ಪೂರ್ತಿ ಸಮಸ್ಯೆಗೆ ಒಳಗಾಗುವ
ಸಾಧ್ಯತೆಗಳಿವೆ. ಇಲ್ಲಿ ಮಕ್ಕಳನ್ನು ಅನಾಹುತದಿಂದ ಹೇಗೆ ಕಾಪಾಡಬೇಕೆಂಬುದರ ಬಗ್ಗೆ ಕೆಲ ಮಾಹಿತಿಯಿದೆ.
ಸಿಂಥೇಟಿಕ್ ಕಲರ್ ಬಳಸಬಾರದು:
ಕಡಿಮೆ ಹಣಕ್ಕೆ ಲಭ್ಯವಿರುವ ಸಿಂಥೇಟಿಕ್ ಕಲರ್ ಅನ್ನು ಹೋಳಿ ಹಬ್ಬದ ವೇಳೆ ಯಾವುದೇ ಕಾರಣಕ್ಕೂ ಬಳಸಬಾರದು. ಇದು ಮಕ್ಕಳ ಚರ್ಮದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ.
ಬಣ್ಣ ಹಚ್ಚುವ ವೇಳೆ ಮಗು ಕನ್ನಡಕವನ್ನು ಧರಿಸಲಿ:
ಬಣ್ಣವನ್ನು ಎರಚುವ ವೇಳೆ ಕಣ್ಣಿಗೆ ಬೀಳುವ ಸಾಧ್ಯತೆಯಿದೆ. ಇದರಿಂದ ಕಣ್ಣು ಉರಿ, ದೃಷ್ಟಿ ದೋಷ, ಕಣ್ಣಿನ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ.
ಪೂರ್ಣ ತೋಳಿನ ಬಟ್ಟೆಯನ್ನು ಮಗುವಿಗೆ ಹಾಕಿ:
ಚರ್ಮದ ಸಮಸ್ಯೆಯಿಂದ ಪಾರಾಗಲು ಮಗುವಿಗೆ ಪೂರ್ಣ ತೋಳಿನ ಬಟ್ಟೆಯನ್ನು ಧರಿಸಿ. ಮಗುವಿನ ಮುಖಕ್ಕೆ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚಿ. ಇದು ಮಗುವಿನ ಚರ್ಮಕ್ಕೆ ಮತ್ತಷ್ಟು ರಕ್ಷಣೆಯನ್ನು ನೀಡುತ್ತದೆ.
ಆಟದ ವೇಳೆ ಮಗುವಿನ ಮೇಲೆ ನಿಗಾ ಇರಿಸಿ
ಮಗು ಹೋಳಿ ಹಬ್ಬವನ್ನು ಆಚರಿಸುವ ವೇಳೆ ಪೋಷಕರು ತುಂಬಾನೇ ಗಮನದಲ್ಲಿಡಬೇಕು. ಕಣ್ಣು, ಕಿವಿ ಮತ್ತು ಮೂಗುಗಳನ್ನು ರಕ್ಷಿಸಿಕೊಂಡು ಆಟವಾಡುವಂತೆ ಎಚ್ಚರ ವಹಿಸಿ.