Select Your Language

Notifications

webdunia
webdunia
webdunia
webdunia

ಬಾಯಲ್ಲಿ ಜೋಲ್ಲು ಸೋರುವುದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಮನೆಮದ್ದು

ಬಾಯಲ್ಲಿ ಜೋಲ್ಲು ಸೋರುವುದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಗುರುವಾರ, 27 ಸೆಪ್ಟಂಬರ್ 2018 (12:23 IST)
ಬೆಂಗಳೂರು : ಚಿಕ್ಕ ಮಕ್ಕಳ ಬಾಯಲ್ಲಿ ಜೋಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ  ಜೋಲ್ಲು ಸುರಿಯುತ್ತಿರುತ್ತದೆ. ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೋಲ್ಲು ಸುರಿಯುತ್ತದೆ. ಇದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಮನೆಮದ್ದು.


ದಿನಕ್ಕೆ ಎರಡು ಲವಂಗವನ್ನು ಬಾಯಲ್ಲಿ ಅಗಿದರೆ ಹೆಚ್ಚು ಜೊಲ್ಲು ಬರುವುದು ನಿಲ್ಲುತ್ತದೆ.ಚಕ್ಕೆ ಪುಡಿಯನ್ನು ನೀರಲ್ಲಿ ಬೆರೆಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.


ಅಡಿಕೆ ಚೂರನ್ನು ಪುಡಿ ಮಾಡಿ ಜೇನುತುಪ್ಪದ ಜೊತೆ ಕಲಸಿ ಬಾಯಿಯೊಳಗೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆದರೆ ಉತ್ತಮ ಪರಿಣಾಮ ಬೀರುತ್ತದೆ.ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಊಟದ ನಂತರ ಸೇವಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.


ಕರಿಮೆಣಸಿನ ಪುಡಿ , ಶುಂಠಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೆಚ್ಚು ಸುರಿಯುವ ಜೊಲ್ಲು ನಿಲ್ಲುತ್ತದೆ. ಏಲಕ್ಕಿಯನ್ನು ನೀರಲ್ಲಿ ಸೇರಿಸಿ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.


ಕಾಫಿ ಬೀಜದ ಪುಡಿಯನ್ನು ನಾಲಿಗೆ ಕೆಳಗೆ ಇಟ್ಟುಕೊಂಡರೆ ಅತಿ ಹೆಚ್ಚು ಜೊಲ್ಲು ನಿಲ್ಲುತ್ತದೆ. ಹಸಿ ಶುಂಠಿಯನ್ನು ನೀರಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅತಿ ಜೊಲ್ಲು ಸಮಸ್ಯೆ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಮಾಡಲು ಅತ್ಯುತ್ತಮ ದಿನ ಯಾವುದು ಗೊತ್ತಾ?!