Select Your Language

Notifications

webdunia
webdunia
webdunia
webdunia

ಪಪ್ಪಾಯಿಯ ಆರೋಗ್ಯಕರ ಲಾಭಗಳು

ಪಪ್ಪಾಯಿಯ ಆರೋಗ್ಯಕರ ಲಾಭಗಳು
ಬೆಂಗಳೂರು , ಮಂಗಳವಾರ, 19 ಜೂನ್ 2018 (15:51 IST)
ಪಪ್ಪಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವ ಅಧಿಕ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದು ಪಪ್ಪಾಯಿಯು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದು ಕೇವಲ ಆರೋಗ್ಯಕ್ಕಷ್ಟೆ ಅಲ್ಲದೆ ಸೌಂದರ್ಯವನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ.
 
* ಚಿಕ್ಕ ಪಪ್ಪಾಯಿಯನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳಲ್ಲಿ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ.
 
* ಮಕ್ಕಳಿಗಷ್ಟೆ ಅಲ್ಲಾ ದೊಡ್ಡವರಲ್ಲಿಯೂ ಪಪ್ಪಾಯಿಯ ನಿಯಮಿತ ಸೇವನೆ ಹೊಟ್ಟೆಯ ಕೆಲವೊಂದು ರೋಗಗಳನ್ನು ನಿವಾರಿಸಿ ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ.
 
* ಅರೆಪಕ್ವ ಹಣ್ಣನ್ನು ತುರಿದು ಗಾಯಗಳಿಗೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.
 
* ಪಪ್ಪಾಯಿ ಹಣ್ಣನ್ನು ರುಬ್ಬಿ. ಆ ಪೇಸ್ಟನ್ನು ಮುಖಕ್ಕೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ, ಮುಖಕ್ಕೆ ಹೊಳಪು ಬರುತ್ತದೆ.
 
* 1 ಚಮಚ ಪಪ್ಪಾಯಿ ಬೀಜದ ಪುಡಿಗೆ ಅರ್ಥ ನಿಂಬೆ ರಸ ಸೇರಿಸಿ ದಿನಕ್ಕೆ 2 ಬಾರಿ ಸೇವಿಸುವುದರಿಂದ ಲಿವರ್‌ ಆರೋಗ್ಯವಾಗಿರುತ್ತದೆ.
 
* ಮೂತ್ರಕೋಶ, ಮೂತ್ರನಾಳಗಳಲ್ಲಿ ಕಲ್ಲುಗಳು ಉಂಟಾಗುವ ಸಮಸ್ಯೆ ಇರುವವರು ನಿತ್ಯವೂ ಪಪ್ಪಾಯಿ ಹಣ್ಣನ್ನು ಸೇವನೆ ಮಾಡುವುದು ಒಳ್ಳೆಯದು.
 
* ಪಪ್ಪಾಯಿ ಬೀಜದ ಪುಡಿಯನ್ನು ರೋಸ್‌ವಾಟರ್‌ ಜೊತೆ ಸೇರಿಸಿ ಪೇಸ್ಟ್‌ ತಯಾರಿಸಿ ಪೈಲ್ಸ್‌ಗೆ ಹಚ್ಚುವುದರಿಂದ ಪೈಲ್ಸ್‌ ಗುಣಮುಖವಾಗುತ್ತದೆ.
 
* ಹಣ್ಣು, ಹಾಲು, ಜೇನುತುಪ್ಪ ಸೇರಿಸಿ ಕೊಟ್ಟರೆ ಮಕ್ಕಳಿಗೆ ಉತ್ತಮ ಟಾನಿಕ್ ಹಾಗೂ  ನರದೌರ್ಬಲ್ಯಕ್ಕೂ ಒಳ್ಳೆಯದು.
 
* ಪಪ್ಪಾಯಿಗೆ ಸ್ವಲ್ಪ ಆಲೀವ್‌ ಎಣ್ಣೆ ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುತ್ತದೆ.
 
* ಪಪ್ಪಾಯಿಯಲ್ಲಿರುವ ಕೆಲವೊಂದು ಅಂಶಗಳು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಅದು ಬರದಂತೆ ತಡೆಯುತ್ತದೆ.
 
* ಹೊಟ್ಟೆಯ ಹುಳ ಮತ್ತು ಇತರ ಕೆಲವೊಂದು ಕ್ರಿಮಿಗಳ ವಿರುದ್ಧ ಪಪ್ಪಾಯಿಯಲ್ಲಿನ ಅಂಶಗಳು ಹೋರಾಡುತ್ತದೆ ಮತ್ತು ಸೋಂಕು ದೇಹವನ್ನು ಆಕ್ರಮಿಸುವುದನ್ನು ತಡೆಯುತ್ತದೆ.
 
* ಇದರಲ್ಲಿನ ಕೆಲವೊಂದು ಅಂಶಗಳನ್ನು ಬಳಸಿಕೊಂಡು ಕ್ಯಾನ್ಸರ್ ನ ಕೋಶಗಳ ವಿರುದ್ಧ ಹೋರಾಡುವ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್‌ಗಳನ್ನು ತಡೆಯಲು ಪರಿಣಾಮಕಾರಿಯಾಗಿದೆ
 
* ಕಾಲುಗಳ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ, ಪಪ್ಪಾಯಿ ಹಣ್ಣಿನ ಪೇಸ್ಟನ್ನು ಹಚ್ಚಿಕೊಳ್ಳಿ. ಇದರಿಂದ ಒಡೆದ ಹಿಮ್ಮಡಿಗೆ ತಕ್ಷಣ ಆರಾಮವನ್ನು ನೀಡಬಹುದು.
 
* ತ್ವಚೆಯ ಮೇಲೆ ಎಲ್ಲಿ ರಿಂಗ್‌ವರ್ಮ್ ಕಂಡು ಬರುತ್ತದೆಯೋ ಅಲ್ಲಿ ಪಪ್ಪಾಯಿ ಹಣ್ಣನ್ನು ಉಜ್ಜಿ. ಇದರಿಂದ ಈ ಉರಿಯೂತವು ಕಡಿಮೆಯಾಗುವುದರ, ಜೊತೆಗೆ ಇದರ ಕೆಂಪಾಗುವಿಕೆಯು ಸಹ ತಗ್ಗುತ್ತದೆ.
 
* ಪಪ್ಪಾಯಿ ಹಣ್ಣಿನ ರಸದೊಂದಿಗೆ ಮೊಸರು ಮಿಶ್ರ ಮಾಡಿ ಹೇರ್ ಪ್ಯಾಕ್ ತಯಾರಿಸಿ ತಿಂಗಳಿಗೊಮ್ಮೆ ಕೂದಲ ಬುಡಕ್ಕೆ ಹಚ್ಚಿ ಕಡಲೆಹಿಟ್ಟಿನಿಂದ ಕೂದಲನ್ನು ತೊಳೆಯುವುದದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುತ್ತದೆ.
 
* ಕಪ್ಪು ಚಹಾವನ್ನು ಸೋಸಿ, ಅದರಲ್ಲಿ ಪಪ್ಪಾಯ ಪೇಸ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ, ನಿಧಾನವಾಗಿ ಮಸಾಜ್ ಮಾಡಿದಲ್ಲಿ, ಮುಖದ ಜಿಡ್ಡು ನಿವಾರಣೆಯಾಗುತ್ತದೆ
 
* ಪಪ್ಪಾಯಿ,ಹಸಿ ಹಾಲು, ಜೇನು ತುಪ್ಪ ಸೇರಿಸಿ ಪ್ಯಾಕ್ ಹಾಕಿಕೊಂಡರೆ ಮುಖದ ಅಂದ ಹೆಚ್ಚುತ್ತದೆ.
 
* ಪಪ್ಪಾಯಿಯ ಸೇವನೆಯಿಂದ ಶರೀರರದ ಗ್ರಂಥಿಗಳೆಲ್ಲವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.
 
* ಒಂದು ಚಮಚ ಬೀಜದ ರಸ, ಹತ್ತು ಹನಿ ನಿಂಬೆರಸದೊಂದಿಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ನೀಡುವುದರಿಂದ ಅಥವಾ ಹಣ್ಣಿನೊಂದಿಗೆ ಕೆಲವು ಬೀಜ ಸೇವನೆಯಿಂದ ಜಂತು ಹುಳಗಳನ್ನು ನಿವಾರಿಸಬಹುದು.
 
* ಪಪ್ಪಾಯಿಯ ಎಲೆಗಳಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ನೋವು ನಿವಾರಣೆಯಾಗುತ್ತದೆ.
 
* ಪಪ್ಪಾಯಿ ಹಣ್ಣು ಮೂಲವ್ಯಾಧಿ, ಯಕೃತ್ತಿನ ದೋಷಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ಎಲೆಗಳಿಂದ ಒಸರುವ ದ್ರವ್ಯವನ್ನು ಗಾಯಕ್ಕೆ ಹಚ್ಚುವುದರಿಂದ ಗಾಯಗಳು ಬೇಗನೆ ವಾಸಿಯಾಗುತ್ತದೆ.
 
* ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸೋಂಕನ್ನು ನಿವಾರಿಸಬಹುದು.
 
* ನಿತ್ಯ 1 ಬಟ್ಟಲು ಪಪ್ಪಾಯಿ ತಿನ್ನಿ. ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುತ್ತದೆ.
 
* ರಾತ್ರಿ ಕುರುಡಿನಿಂದ ಬಳಲುವವರು ಪಪ್ಪಾಯಿ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. 
 
* ಬಾಣಂತಿಯರು ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಹಲಸಿನ ಉಪಯೋಗಗಳು