Select Your Language

Notifications

webdunia
webdunia
webdunia
webdunia

ಆರೋಗ್ಯದ ಮೇಲೆ ಬೆಲ್ಲದ ಕರಾಮತ್ತು…!

ಆರೋಗ್ಯದ ಮೇಲೆ ಬೆಲ್ಲದ ಕರಾಮತ್ತು…!
ಬೆಂಗಳೂರು , ಸೋಮವಾರ, 29 ನವೆಂಬರ್ 2021 (13:39 IST)
ಸಿಹಿ ಸಿಹಿಯಾದ ಬೆಲ್ಲವನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.ನಿಮಗೆ ತಿಳಿದಿರಲಿ, ಬೆಲ್ಲವು ಖಾದ್ಯವನ್ನು ಸಿಹಿಯಾಗಿಸುವುದೇ ಅಲ್ಲದೇ, ಆರೊಗ್ಯವನ್ನು ಸಿಹಿಯಾಗಿಸುತ್ತದೆ.
ಅದೆಷ್ಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಬೆಲ್ಲಕ್ಕೆ ಇದೆ. ಹಾಗಾದರೆ ಯಾವೆಲ್ಲಾ ರೋಗಗಳಿಗೆ ಬೆಲ್ಲವು ಕರಾಮತ್ತು ಮಾಡುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿ ನಿಮ್ಮ ವಿಜಯ ಕರ್ನಾಟಕದಲ್ಲಿ.
ಮಲಬದ್ಧತೆ
ಬೆಲ್ಲವು ದೇಹದಲ್ಲಿನ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಹೀಗಾಗಿ ಕರುಳಿನ ಚಲನೆಯನ್ನು ಉತ್ತೇಜಿಸಿ ಮಲಬದ್ಧತೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಇದು ಕರುಳಿನಲ್ಲಿರುವ ಗಟ್ಟಿಯಾದ ಮಲವನ್ನು ಖಾಲಿ ಮಾಡಲು ಸಹಾಯ ಮಾಡುವುದಲ್ಲದೇ, ಮೂತ್ರವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬೆಲ್ಲದ ಸೇವನೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
ರಕ್ತ
ಬೆಲ್ಲದಲ್ಲಿನ ಅತ್ಯುತ್ತಮವಾದ ಪ್ರಯೋಜನಗಳಲ್ಲಿ ರಕ್ತದ ಶುದ್ದೀಕರಣವು ಒಂದು. ಬೆಲ್ಲವನ್ನು ಆಗಾಗ್ಗೆ, ನಿಯಮಿತವಾಗಿ ಸೇವಿಸಿದಾಗ ದೇಹದಲ್ಲಿನ ರಕ್ತವನ್ನು ಶುದ್ದೀಕರಣ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಯಾವುದೇ ರೋಗಗಳು ಹತ್ತಿರ ಸುಳಿಯದಂತೆ ತಡೆಹಿಡಿಯುತ್ತದೆ. ಹಾಗೆಯೇ ನಿಮ್ಮ ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.
ರೋಗ ನಿರೋಧಕ ಶಕ್ತಿ
ಬೆಲ್ಲವು ಉತ್ಕರ್ಷಣ ನಿರೋಧಕ, ಸತು ಮತ್ತು ಸೆಲೆನಿಯಮ್ ನಂತಹ ಸಮೃದ್ಧವಾದ ಖನಿಜಗಳಿಂದ ತುಂಬಿದೆ. ಇದು ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಬೆಲ್ಲವು ಸೋಂಕುಗಳ ವಿರುದ್ಧ ಹೋರಾಡುವುದಲ್ಲದೇ, ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಮುಟ್ಟಿನ ನೋವು
ಮುಟ್ಟಿನ ಸಮಸ್ಯೆಗೆ ಸೂಪರ್ ಮನೆಮದ್ದು ಎಂದರೆ ಅದು ಬೆಲ್ಲ. ಇದೊಂದು ನೈಸರ್ಗಿಕವಾದ ಚಿಕಿತ್ಸೆಯಾಗಿದ್ದು, ತಿಂಗಳಿಗೊಮ್ಮೆ ಔಷಧಿಗಳಿಂದ ದೂರ ಉಳಿಯಲು ಬೆಲ್ಲವನ್ನು ಸೇವಿಸಿದರೆ ಸಾಕು. ವಾಸ್ತವವಾಗಿ, ಬೆಲ್ಲದಲ್ಲಿ ಅನೇಕ ಪೊಷಕಾಂಶಗಳಿಂದ ಸಮೃದ್ಧವಾಗಿದೆ.
ಹೊಟ್ಟೆ

ಸಾಮಾನ್ಯವಾಗಿ ಬೆಲ್ಲವು ದೇಹದ ಉಷ್ಣತೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಬೇಸಿಗೆಯ ಸಮಯದಲ್ಲಿ ಹಣ್ಣಿನ ಜ್ಯೂಸ್ ಅಥವಾ ಪಾನಕಗಳಲ್ಲಿ ಬೆಲ್ಲವನ್ನು ಸೇರಿಸುವುದರಿಂದ ಹೊಟ್ಡೆಯನ್ನು ತಂಪಾಗಿಸುತ್ತದೆ. ಚಳಿಗಾಲದ ಸಮಯದಲ್ಲಿಯೂ ಬೆಲ್ಲದ ಕಷಾಯ ಅನೇಕ ರೋಗಗಳಿಗೆ ಕಡಿವಾಣ ಹಾಕಬಹುದಾಗಿರುತ್ತದೆ.
ಕೀಲು ನೋವು
ಬೆಲ್ಲದಲ್ಲಿರುವ ಪೊಟ್ಯಾಶಿಯಮ್ ಮತ್ತು ಸೋಡಿಯಂ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೀಲು ನೋವನ್ನು ನಿವಾರಿಸಲು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಒಂದು ತುಂಡು ಬೆಲ್ಲವನ್ನು ಸೇವಿಸಿ ಅಥವಾ ಬೆಲ್ಲದ ಹಾಲನ್ನು ಕೂಡ ಕುಡಿಯಬಹುದು. ಇದರಿಂದಾಗಿ ಸಂಧಿವಾತದಂತಹ ಕೀಲು ಮತ್ತು ಮೂಳೆಯ ಸಮಸ್ಯೆಗಳನ್ನು ತಡೆಯಬಹುದಾಗಿದೆ.
ತೂಕ ಕಡಿಮೆ
ಬೆಲ್ಲದಲ್ಲಿನ ಪೊಟ್ಯಾಶಿಯಮ್, ಎಲೆಕ್ಟ್ರೋಲೈಟ್ ಗಳ ಸಮತೋಲನವನ್ನು ಹಾಗು ಸ್ನಾಯುಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಸುಲಭವಾಗಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನೀವು ತೂಕ ನಷ್ಟ ಮಾಡಿಕೊಳ್ಳಬೇಕು ಎಂದಾದರೆ ನಿಮ್ಮ ಆಹಾರದಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸಿ.


Share this Story:

Follow Webdunia kannada

ಮುಂದಿನ ಸುದ್ದಿ

ನೀರು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಮುಖ್ಯ