Select Your Language

Notifications

webdunia
webdunia
webdunia
webdunia

ಮುಖದಲ್ಲಿ ಈ ಲಕ್ಷಣಗಳಿದ್ದರೆ ನಿಮಗೆ ಈ ಸಮಸ್ಯೆ ಇದೆ ಎಂದರ್ಥ

ಮುಖದಲ್ಲಿ ಈ ಲಕ್ಷಣಗಳಿದ್ದರೆ ನಿಮಗೆ ಈ ಸಮಸ್ಯೆ ಇದೆ ಎಂದರ್ಥ
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (06:18 IST)
ಬೆಂಗಳೂರು: ಮುಖದಲ್ಲಿ ಕಾಣುವ ಕೆಲವು ಲಕ್ಷಣಗಳಿಂದ ನಿಮಗೆ ಯಾವ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿಯಬಹುದಂತೆ. ಆದ್ದರಿಂದ ವೈದ್ಯರ ಬಳಿ ಹೋದಾಗ ಅವರು ನಮ್ಮ ಮುಖವನ್ನು ಹೆಚ್ಚು ಗಮನಿಸುತ್ತಾರೆ. ಹಾಗಾದ್ರೆ ಆ ಲಕ್ಷಣಗಳು ಯಾವುದೆಂದು ತಿಳಿಯೋಣ.



*ಒಣಗಿದ ಚರ್ಮ ಹಾಗೂ ಒಡೆದ ತುಟಿ: ಇದು ನಿರ್ಜಲೀಕರಣದ ಲಕ್ಷಣ. ನಿಮ್ಮ ಬೆವರಿನ ಗ್ರಂಥಿಯಲ್ಲಿ ಸಮಸ್ಯೆ ಇದೆ ಎಂದು ತಿಳಿಯಬಹುದು.

*ಮುಖದಲ್ಲಿ ಅತಿಯಾಗಿ ಕೂದಲು ಬೆಳೆದಿದ್ದರೆ: ಮುಖದಲ್ಲಿ ಗಲ್ಲ ಮತ್ತು ತುಟಿಯ ಮೇಲ್ಭಾಗದಲ್ಲಿ ಕೂದಲು ಹೆಚ್ಚಾಗಿ ಬೆಳೆದರೆ ಇದು ಪಾಲಿಸಿಸ್ಟಿಕ್ ಒವರಿಸ್ ಸಿಂಡ್ರಂ ಲಕ್ಷಣವಾಗಿದೆ. ಹಾರ್ಮೋನ್ ಅಸಮತೋಲನದಿಂದ ಈ ರೀತಿಯಾಗುತ್ತದೆ.

*ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿ ಹಳದಿ ಕಲೆಗಳು: ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವ ಲಕ್ಷಣವಾಗಿದೆ. ಇಂತಹ ಕಲೆ ಇದ್ದರೆ ಅಂತವರಿಗೆ ಹೃದಯಾಘಾತದ ಅಪಾಯ ಎದುರಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿಗೆ ಗುಪ್ತಾಂಗದ ನೋವಿಗೆ ಏನು ಪರಿಹಾರ?