ಲಕ್ಷ್ಮೀದೇವಿಯ ಈ ವಿಗ್ರಹವನ್ನು ಪೂಜಿಸಿದರೆ ನಿಮಗೆ ಆರ್ಥಿಕ ಸಮಸ್ಯೆ ಎಂದೂ ಕಾಡುವುದಿಲ್ಲ

ಶುಕ್ರವಾರ, 20 ಡಿಸೆಂಬರ್ 2019 (06:15 IST)
ಬೆಂಗಳೂರು: ಲಕ್ಷ್ಮೀದೇವಿ ಸಂಪತ್ತಿಗೆ ಒಡತಿ. ಆದ್ದರಿಂದ ಲಕ್ಷ್ಮೀದೇವಿ ನೆಲೆಸಿರುವ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಆದಕಾರಣ ಮನೆಯಲ್ಲಿ ಲಕ್ಷ್ಮೀದೇವಿಯ ಈ ವಿಗ್ರಹವನ್ನು ಪೂಜಿಸಿದರೆ ನಿಮಗೆ ಆರ್ಥಿಕ ಸಮಸ್ಯೆ ಎಂದೂ ಎದುರಾಗುವುದಿಲ್ಲ.ಮನೆಯಲ್ಲಿ ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಲಕ್ಷ್ಮೀದೇವಿಯ ಮೂರ್ತಿ ಇರಬೇಕು. ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ವಿರಾಜಮಾನವಾಗಿದ್ದು, ಮೂರ್ತಿಯ ಕೈಯಲ್ಲಿ ಧನ ಕಲಶ, ಕಮಲದ ಹೂ, ಶಂಖ ಮತ್ತು ಆಶೀರ್ವದದ ಮುದ್ರೆ ಇರಬೇಕು, ಹಾಗೇ ಕೈಯಲ್ಲಿ ದೊಡ್ಡ ಉಂಗುರ ಇರಬೇಕು.  ಅದರ ಜೊತೆಗೆ ಗಣಪತಿ ಮೂರ್ತಿ ಇದ್ದರೆ ಉತ್ತಮ. ಈ ಮೂರ್ತಿಗೆ ಪ್ರತಿದಿನ ಅರಶಿನ ಕುಂಕುಮ ಹಚ್ಚಿ ಹೂವಿಟ್ಟು ಪೂಜೆ ಮಾಡಬೇಕು. ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ