Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ತಯಾರಿಸಿ ಫೈನಾಫಲ್ ಬರ್ಫಿ

ಮಳೆಗಾಲದಲ್ಲಿ ತಯಾರಿಸಿ ಫೈನಾಫಲ್ ಬರ್ಫಿ
ಬೆಂಗಳೂರು , ಸೋಮವಾರ, 15 ಜೂನ್ 2020 (09:16 IST)
ಬೆಂಗಳೂರು : ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಪೈನಾಫಲ್. ಇದರಿಂದ ಮಕ್ಕಳಿಗೆ ರುಚಿಕರವಾದ, ಸಿಹಿಯಾದ ಫೈನಾಫಲ್ ಬರ್ಫಿಯನ್ನು ತಯಾರಿಸಿ ಕೊಡಿ.

ಬೇಕಾಗುವ ಸಾಮಾಗ್ರಿಗಳು: ಫೈನಾಫಲ್ ಹಣ್ಣಿನ ಪೀಸ್, ತೆಂಗಿನ ತುರಿ 2 ಕಪ್, ತುಪ್ಪ 2 ಚಮಚ, ಸಕ್ಕರೆ 1 ಕಪ್, ಏಲಕ್ಕಿ ಪುಡಿ ½ ಚಮಚ.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ತೆಂಗಿನತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಫೈನಾಫಲ್ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ. ಇದಕ್ಕೆ ಹುರಿದ ತೆಂಗಿನ ತುರಿ, ಸಕ್ಕರೆ , ಏಲಕ್ಕಿ ಪುಡಿ ಬೆರೆಸಿ ಮಿಶ್ರಣ ಗಟ್ಟಿಯಾಗುವವರೆಗೂ ಕುದಿಸಿ. ಬಳಿಕ ತುಪ್ಪ ಹಾಕಿ ತಳ ಹಿಡಿಯದಂತೆ ಕೈಯಾಡಿಸಿ. ಬಳಿಕ ಅದನ್ನು ತುಪ್ಪ ಸವರಿದ ಪಾತ್ರೆಗೆ ಹಾಕಿ ತಣ್ಣಗಾದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಲದಲ್ಲಿ ಈ ರೀತಿಯಾಗಿ ತ್ವಚೆಯ ರಕ್ಷಣೆ ಮಾಡಿ