ಅಂಜೂರ ಹಣ್ಣು ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಸಹಾಯಕ

Webdunia
ಸೋಮವಾರ, 18 ಅಕ್ಟೋಬರ್ 2021 (12:36 IST)
ಹಣ್ಣುಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಹೀಗಿರುವಾಗ ಅಂಜೂರ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ? ಎಂಬುದನ್ನು ತಿಳಿದುಕೊಳ್ಳಿ.

ಜತೆಗೆ ವಾರಕ್ಕೆ ಎರಡು ಬಾರಿಯಾದರೂ ಅಂಜೂರ ಹಣ್ಣು ಸೇವಿಸುವ ಮೂಲಕ ನಿಮ್ಮ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಸಾಮಾನ್ಯವಾಗಿ ಕೆಲವು ಹಣ್ಣುಗಳನ್ನು ಒಣಗಿಸಿ ಡ್ರೈಫ್ರೂಟ್ಸ್ ಆಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹೀಗಿರುವಾಗ ಎಲ್ಲಾ ಕಾಲದಲ್ಲಿಯೂ ಸಹ ಹಣ್ಣುಗಳ ರುಚಿಯನ್ನು ಸವಿಯಬಹುದು ಜತೆಗೆ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂಜೂರ ಹಣ್ಣಿನಲ್ಲಿ ತಾಮ್ರ, ಗಂಧಕ, ವಿಟಮಿನ್ ಎ, ಬಿ ಮತ್ತು ಸಿ ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.
ಕ್ಯಾನ್ಸರ್ ವಿರೋಧಿ ಗುಣ

ಅಂಜೂರ ಹಣ್ಣುಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಕ್ಯಾನ್ಸರ್ನಂತಹ ರೋಗಗಳನ್ನು ತಡೆಯಲು ಸಹಾಯಕವಾಗುತ್ತದೆ. ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ಇದೊಂದೇ ಅಲ್ಲದೇ ವಿಟಮಿನ್ ಎ ಹೇರಳವಾಗಿರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಮಧುಮೇಹ ಸಮಸ್ಯೆ ನಿಯಂತ್ರಣ

ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಜತೆಗೆ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಲು ಸಹಾಯಕವಾಗಿದೆ. ಅಂಜೂರದಲ್ಲಿ ಫೈಬರ್, ಪೊಟ್ಯಾಶಿಯಂ, ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು ಹೇರಳವಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ಅನ್ನು ತೆಗೆದುಹಾಕುವುದರ ಜತೆಗೆ ಅಧಿಕ ಬಿಪಿ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಪ್ರತಿ ರಾತ್ರಿ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವ ಅಭ್ಯಾಸ ಒಳ್ಳೆಯದು.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಅಂಜೂರವನ್ನು ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂಜೂರವನ್ನು ಪ್ರತಿನಿತ್ಯ ಹಾಲಿನೊಂದಿಗೆ ಸೇವಿಸುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments