Select Your Language

Notifications

webdunia
webdunia
webdunia
webdunia

ಮೂಳೆ ಮುರಿತ ವೇಗವಾಗಿ ಸರಿಯಾಗಲು ಈ ಆಹಾರಗಳನ್ನು ಸೇವಿಸಿ

ಮೂಳೆ ಮುರಿತ ವೇಗವಾಗಿ ಸರಿಯಾಗಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಬುಧವಾರ, 17 ಜುಲೈ 2019 (06:09 IST)
ಬೆಂಗಳೂರು : ನಡೆಯುವಾಗ, ಓಡುವಾಗ, ಅಥವಾ ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತೇವೆ. ಇದರಿಂದ ಮೂಳೆ ಮೂರಿತ ಉಂಟಾಗಬಹುದು. ಆಗ ವೈದ್ಯರ ಬಳಿ ಚಿಕಿತ್ಸೆ ಮಾಡುತ್ತೇವೆ. ಹಾಗೇ ಈ ಸಮಯದಲ್ಲಿ ಅದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಮೂಳೆಗಳು ವೇಗವಾಗಿ ಸರಿಯಾಗುತ್ತದೆ.




* ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು ಇದು ನೈಸರ್ಗಿಕವಾಗಿ ಮೂಳೆಗಳನ್ನು ಸರಿಪಡಿಸುವುದು. ಹಾಗಾಗಿ ಇವುಗಳನ್ನು ಸೇವಿಸಿದರೆ ಮುರಿದ ಮೂಳೆಗಳು ವೇಗವಾಗಿ ಸರಿಯಾಗುವುದು


* ಮೀನಿನಲ್ಲಿ ಅತ್ಯಧಿಕ ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಇದೆ. ನೀವು ಸೇವಿಸುವಂತಹ ಕ್ಯಾಲ್ಸಿಯಂ ಪರಿಣಾಮಕಾರಿಯಾಗಿ ಕೆಲಸ ಮಾಡಲು ವಿಟಮಿನ್ ಡಿ ಅತ್ಯಗತ್ಯ. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೂಳೆಗಳನ್ನು ಬಲಗೊಳಿಸಿ, ವೇಗವಾಗಿ ಚೇತರಿಸುವಂತೆ ಮಾಡುವುದು.


* ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಂಡರೆ ಅದರಿಂದ ಮುರಿದ ಮೂಳೆಗಳು ನೈಸರ್ಗಿಕವಾಗಿ ಸರಿಯಾಗುವುದು. ಕುಂಬಳಕಾಯಿಯಲ್ಲಿ ಇರುವಂತಹ ಖನಿಜಾಂಶಗಳು ಮೂಳೆಗಳು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು. ಅಲ್ಲದೇ ಒಂದು ವೇಳೆ ನಿಮ್ಮ ದೇಹದಲ್ಲಿ ವಿಟಮಿನ್ ಬಿ ಕೊರತೆ ಇದ್ದರೆ ಕುಂಬಳ ಬೀಜಗಳನ್ನು ತಿನ್ನುವ ಮೂಲಕ ಈ ಕೊರತೆಯನ್ನು ನೀಗಿಸಬಹುದು.


* ಕೆಂಪು ಬಣ್ಣದ ಕ್ಯಾಪ್ಸಿಕಂ, ಮೊಟ್ಟೆಗಳು, ಕಪ್ಪು ಬೀನ್ಸ್ ಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿರುವ ಅಂಶ ಮೂಳೆ ಬೆಳವಣಿಗೆಗೆ ತುಂಬಾ ಸಹಕಾರಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಒಡೆದ ಕೈಕಾಲುಗಳ ಚರ್ಮವನ್ನು ಮೃದುವಾಗಿಸಲು ಈ ಮನೆಮದ್ದುಗಳನ್ನು ಬಳಸಿ.