Webdunia - Bharat's app for daily news and videos

Install App

ದಾಳಿಂಬೆ ಸೇವಿಸಿ ಹೃದ್ರೋಗ-ಕ್ಯಾನ್ಸರ್ ಅನ್ನು ದೂರವಿಡಿ..!

Webdunia
ಮಂಗಳವಾರ, 12 ಅಕ್ಟೋಬರ್ 2021 (07:27 IST)
ದಾಳಿಂಬೆ ರಸ ಒಂದೇ ಕ್ಯಾನ್ಸರನ್ನು ದೂರ ಇಡುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ, ಮೆಡಿಟರೇಯನ್ ಆಹಾರ ಪದ್ಧತಿಯಂತಹ ಆರೋಗ್ಯಕರ, ಸಸ್ಯ ಆಧಾರಿತ ಆಹಾರ ಕ್ರಮಕ್ಕೆ ಪೌಷ್ಟಿಕಾಂಶಯುಕ್ತ ಸೇರ್ಪಡೆ ಆಗಬಲ್ಲದು.

ಹಾರ್ವರ್ಡ್ ವರದಿಯ ಪ್ರಕಾರ, ದಾಳಿಂಬೆ ರಸ, ಹಾನಿಕಾರಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡಬಲ್ಲದು.
ಫೈಬರ್ ಅಂಶ ಜೀರ್ಣಕಾರಿ ಆರೋಗ್ಯಕ್ಕೆ ಸಹಕಾರಿ ಆಗಬಲ್ಲದು
ದಾಳಿಂಬೆ ಹಣ್ಣು ಮಾತ್ರವಲ್ಲ, ಎಲ್ಲ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸುವ ಬದಲು ಹಾಗೆಯೇ ಸೇವಿಸುವುದು ಉತ್ತಮ. ಅದರಿಂದ ದಾಳಿಂಬೆಯಿಂದ ಫೈಬರ್ಯುಕ್ತ ಬೀಜಗಳನ್ನು ಕೂಡ ತಿನ್ನುವುದು ಸಾಧ್ಯವಾಗುತ್ತದೆ. ಒಂದೂವರೆ ಕಪ್ ದಾಳಿಂಬೆ ಬೀಜದಲ್ಲಿ 72 ಕ್ಯಾಲೋರಿ, 3.5 ಗ್ರಾಂ ಫೈಬರ್ ಮತ್ತು 12 ಗ್ರಾಂ ಸಕ್ಕರೆ ಇದೆ. ದಾಳಿಂಬೆ ಕಾಳುಗಳು ಎಲ್ಲಾ ರೀತಿಯ ಸಲಾಡ್ಗಳಿಗೆ ಒಳ್ಳೆಯ ಬಣ್ಣ ನೀಡುತ್ತದೆ ಅಥವಾ ನೀವು ಅದನ್ನು ಸೀರಿಯಲ್ ಮತ್ತು ಮೊಸರಿನಲ್ಲೂ ಬಳಸಬಹುದು.
ಪ್ರಾಸ್ಟೇಟ್ನ ಆರೋಗ್ಯಕ್ಕೆ ಲಾಭದಾಯಕ ಆಗಬಹುದು
ದಾಳಿಂಬೆ ರಸ, ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿರುವ ಪುರುಷರಲ್ಲಿ ಪ್ರಾಸ್ಟೇಟ್ - ನಿರ್ದಿಷ್ಟ ಪ್ರತಿಜನಕ ಅಥವಾ ಪಿಎಸ್ಎ ಮಟ್ಟವನ್ನು ಸ್ಥಿರಗೊಳಿಸಬಲ್ಲದು ಎನ್ನಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಬಳಿಕ, ದಿನಕ್ಕೆ ಎಂಟು ಔನ್ಸ್ಗಳಷ್ಟು ದಾಳಿಂಬೆ ರಸವನ್ನು ಕುಡಿದ ಪುರುಷರಲ್ಲಿ ಪಿಎಸ್ಎ ಮಟ್ಟವು ಸ್ಥಿರವಾಗಿರುವ ಮಟ್ಟವನ್ನು ಸುಮಾರು ನಾಲ್ಕು ಪಟ್ಟು ಹೆಚ್ಚಿಸಿದೆ ಎಂದು ಲಾಸ್ ಏಂಜಲೀಸ್ನ 2006ರ ಜುಲೈನಲ್ಲಿ ಪ್ರಕಟವಾದ ಕ್ಲಿನಿಕಲ್ ಕ್ಯಾನ್ಸರ್ ಸಂಶೋಧನೆಯ ಅಧ್ಯಯನ ವರದಿ ತಿಳಿಸಿದೆ. ಕೆಲವು ಸಂಶೋಧನೆಗಳ ಪ್ರಕಾರ, ದಾಳಿಂಬೆ ರಸದಲ್ಲಿನ ಘಟಕಗಳು , ಕ್ಯಾನ್ಸರ್ ಹರಡುವಿಕೆಯನ್ನು ಉತ್ತೆಜಿಸುವ ರಾಸಾಯನಿಕ ಸಂಕೇತದ ಕಡೆಗಿನ ಆಕರ್ಷಣೆ ದುರ್ಬಲಗೊಳಿಸುವ ಮೂಲಕ ಕ್ಯಾನ್ಸರ್ ಕೋಶಗಳ ಚಲನೆ ತಡೆಯಲು ಸಹಾಯ ಮಾಡಿದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
 ಸಂಶೋಧನೆಯ ಪ್ರಕಾರ, ದಾಳಿಂಬೆ ಬೀಜಗಳಲ್ಲಿನ ಆ್ಯಂಟಿ ಆ್ಯಕ್ಸಿಡೆಂಡ್ ಅಂಶಗಳು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇಸ್ರೇಲ್ ಪುರುಷರ ಮೇಲೆ ನಡೆಸಿದ ಅಧ್ಯಯನ ಒಂದರಲ್ಲಿ, ಧಮನಿಗಳಲ್ಲಿ ಈಗಾಗಲೇ ರೂಪುಗೊಂಡಿರುವ ಪ್ಲೇಕ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಲ್ಲದು ಮತ್ತು ಉತ್ತಮ ಕೊಲೆಸ್ಟ್ರಾಲ್ ಹೆಚ್ಡಿಎಲ್ ರಚನೆಯನ್ನು  ಸುಧಾರಿಸುತ್ತದೆ. ಇನ್ನೊಂದು ಇಸ್ರೇಲಿ ಸಂಶೋಧನೆಯೊಂದರಲ್ಲಿ, ದಾಳಿಂಬೆ ರಸವನ್ನು ಸೇವಿಸಿದ ಇಲಿಗಳಲ್ಲಿ, ಅಪಧಮನಿಕಾಠಿಣ್ಯದ ಬೆಳವಣಿಗೆಯಲ್ಲಿ ಇಳಿಕೆ ಕಂಡು ಬಂದಿತ್ತು. 2005ರ ಸೆಪ್ಟೆಂಬರ್ನ ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯಾಲಾಜಿಯಲ್ಲಿ ಪ್ರಕಟವಾದ ಸಣ್ಣ ಅಧ್ಯಯನ ವರದಿಯ ಪ್ರಕಾರ, ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವುದರಿಂದ ಹೃದಯವನ್ನು ಪೋಷಿಸುವ ಅಪಧಮನಿಗಳ ಮೂಲಕ ರಕ್ತದ ಹರಿವಿನಲ್ಲಿ ಒತ್ತಡ ಪ್ರೇರಿತ ಇಳಿಕೆ ಕಡಿಮೆ ಮಾಡಬಹುದು.
ಗರ್ಭಿಣಿಯರಲ್ಲಿ ಭ್ರೂಣದ ಮಿದುಳನ್ನು ರಕ್ಷಿಸುತ್ತದೆ
ಹಾರ್ವರ್ಡ್ ಸಂಶೋಧಕರ ವರದಿಯ ಪ್ರಕಾರ, ದಾಳಿಂಬೆ ರಸಕ್ಕೆ ಒಡ್ಡಿಕೊಂಡ ಐಯುಜಿಆರ್ ಶಿಶುಗಳಲ್ಲಿ ಮೆದುಳಿನ ಗಾಯದ ಅಪಾಯವು ಕಡಿಮೆ ಇರುತ್ತದೆ. ಮುಖ್ಯವಾಗಿ ಗರ್ಭಿಣಿಯರು ನಿತ್ಯವೂ 8 ಔನ್ಸ್ ದಾಳಿಂಬೆ ರಸ ಸೇವಿಸುವುದರಿಂದ ಭ್ರೂಣನಾಳದ ಸಂಕೋಚನದ ಅಪಾಯ ಹೆಚ್ಚುವುದಿಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ
Show comments