ಪಂಚಭೂತಗಳಲ್ಲಿ ನೀರು ಸಹ ಒಂದು. ಅದರಲ್ಲೂ ಬೇಸಿಗೆ ಕಾಲದಲ್ಲಿ ನೀರನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಈಗಿನ ಸಮಯದಲ್ಲಿ ಒಂದು ದಿನ ನೀರು ಕುಡಿಯದಿದ್ದರೆ ಸಂಪೂರ್ಣವಾಗಿ ನಾವು ನಿತ್ರಾಣವಾಗಿ ಬಿಡುತ್ತೇವೆ.ಹೀಗಾಗಿ ನಮ್ಮ ದೇಹ ಶೇಕಡಾ 70 ರಷ್ಟು ನೀರಿನಾಂಶವನ್ನು ಹೊಂದಿರಬೇಕು. ಆದರೆ ಸರಿಯಾದ ಸಮಯಕ್ಕೆ ನೀರು ಕುಡಿಯದೆ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ನಮ್ಮ ದೇಹವನ್ನು ನವೀಕರಣ ಮಾಡಲು ಪ್ರತಿನಿತ್ಯ 7-8 ಎಂಟು ಗ್ಲಾಸ್ ಗಳಷ್ಟು ನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.