ಬೆಂಗಳೂರು: ಊಟದ ಜತೆಗೆ ಮಜ್ಜಿಗೆ ಕುಡಿಯುವುದು ಎಲ್ಲರಿಗೂ ಇಷ್ಟವೇ. ಬಾಯಾರಿಕೆ ನಿವಾರಿಸಲು ಮಜ್ಜಿಗೆ ಕುಡಿಯುವುದು ಹಿಂದಿನಿಂದಲೂ ಬಂದ ವಾಡಿಕೆ. ಯಾವುದೆಲ್ಲಾ ಕಾರಣಕ್ಕೆ ಮಜ್ಜಿಗೆ ನಮ್ಮ ದೇಹಕ್ಕೆ ಒಳ್ಳೆಯದು ಎಂದು ನೋಡೋಣ.
ಮಜ್ಜಿಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವುದಕ್ಕೆ ಉತ್ತಮ ಮತ್ತು ಸುಲಭವಾಗಿ ಸಿಗುವ ಆಹಾರ ವಸ್ತು. ಬಹುಶಃ ಹಿಂದಿನವರು ಊಟದ ಜತೆಗೆ ಮಜ್ಜಿಗೆ ಕುಡಿಯುವ ಸಂಪ್ರದಾಯ ಇಟ್ಟುಕೊಂಡಿದ್ದೂ ಇದೇ ಕಾರಣಕ್ಕೆ.
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಅಂಶ ಹೆಚ್ಚಿರುತ್ತಿದೆ. ಇದು ದೇಹಕ್ಕೆ ಒಳ್ಳೆಯದು. ಕ್ಯಾಲ್ಶಿಯಂ ಕೂಡಾ ಸ್ವಲ್ಪ ಪ್ರಮಾಣದಲ್ಲಿರುವುದರಿಂದ ಶಕ್ತಿ ನೀಡುತ್ತದೆ. ಅಜೀರ್ಣದಿಂದ ಬರುವ ಹೊಟ್ಟೆ ನೋವು, ಹೊಟ್ಟೆ ತೊಳೆಸಿದಂತಾಗುವುದು, ಬೇಧಿ ಮುಂತಾದವುಕ್ಕೆ ಮಜ್ಜಿಗೆಗೆ ಸ್ವಲ್ಪ ಇಂಗು ಹಾಕಿಕೊಂಡು ಕುಡಿದರೆ ಉತ್ತಮ ಪರಿಹಾರ.
ಇದು ನಮ್ಮ ದೇಹದ ಉಷ್ಣತೆಯನ್ನು ಹೊರಗೆ ಹಾಕಿ ದೇಹ ತಂಪಗಾಗಿಸುತ್ತದೆ. ಇದೇ ಕಾರಣಕ್ಕೆ ವಿಪರೀತ ಶೀತವಾದಾಗ ಮಜ್ಜಿಗೆ ಕುಡಿಯದಂತೆ ಸಲಹೆ ಮಾಡುತ್ತಾರೆ. ಹುಳಿಯಿಲ್ಲದ ಮಜ್ಜಿಗೆಗೆ ಸಾಕಷ್ಟು ನೀರು ಸೇರಿಸಿಕೊಂಡು ಕುಡಿಯುವುದು ಅಸಿಡಿಟಿಗೆ ಉತ್ತಮ ಪರಿಹಾರ. ಹಾಗಾಗಿ ಊಟವಾದ ಮೇಲೆ ಸ್ವಲ್ಪ ಮಜ್ಜಿಗೆ ಕುಡಿದು ಆರೋಗ್ಯವಾಗಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ