ಬೆಂಗಳೂರು: ಹರಳೆಣ್ಣೆ ಕುಡಿದಾಂಗೆ ಮುಖ ಮಾಡೋದು ಎಂಬ ಮಾತಿದೆ. ಅದು ಅಷ್ಟೊಂದು ಕಡು ವಾಸನೆಯ ಎಣ್ಣೆಯಂತೆ. ಆದರೆ ಇದರಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. ಅವರು ಯಾವುವೆಲ್ಲಾ ನೋಡೋಣ.
ಕಣ್ಣ ಕೆಳಗೆ ಅಥವಾ ಮುಖದಲ್ಲಿ ಕಪ್ಪು ವರ್ತುಲದ ಚಿಂತೆಯೇ? ಹಾಗಿದ್ದರೆ ರಾತ್ರಿ ಮಲಗುವ ಮುಂಚೆ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿ ಮಲಗಿದರೆ, ಕೆಲ ದಿನಗಳ ನಂತರ ಕಪ್ಪು ಕಲೆಗಳನ್ನು ನಿವಾರಿಸುತ್ತವೆ.
ಹುಬ್ಬು ಅಂದ ಕಾಣಬೇಕೆಂದು ಬಯಸುವವರು, ಹುಬ್ಬಿನ ಮೇಲೆ ದಿನಾ ಹಚ್ಚಿಕೊಳ್ಳುವುದರಿಂದ ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯುತ್ತವೆ. ಮಲಗುವ ಮುಂಚೆ, ಕೂದಲು, ಕಣ್ಣಿನ ಮೇಲ್ಭಾಗಕ್ಕೆ ಹಚ್ಚಿಕೊಳ್ಳುವುದರಿಂದ, ಒತ್ತಡ ಕಡಿಮೆಯಾಗಿ ಚೆನ್ನಾಗಿ ನಿದ್ರೆ ಮಾಡಬಹುದು.
ಉಷ್ಣದಿಂದಾಗಿ ಹೊಟ್ಟೆ ನೋವಾಗುತ್ತಿದ್ದರೆ, ಹೊಕ್ಕುಳದ ಸುತ್ತ ಹರಳೆಣ್ಣೆ ಹಚ್ಚಿದರೆ, ಹೊಟ್ಟೆ ನೋವು ಉಪಶಮನವಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ