Webdunia - Bharat's app for daily news and videos

Install App

ಉತ್ತಮ ಆರೋಗ್ಯಕ್ಕಾಗಿ ಕುಡಿಯಿರಿ ಜೀರಿಗೆ ನೀರು

Webdunia
ಮಂಗಳವಾರ, 19 ಜೂನ್ 2018 (16:16 IST)
ಜೀರಿಗೆ ಅಂದ್ರೆ ಬರಿ ಸಾಂಬಾರ್ ಪದಾರ್ಥ ಮತ್ತು ಅಡುಗೆಗೆ ಮಾತ್ರವಲ್ಲ, ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್‌ಗಳು ಹಲವಾರು ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಜೀರಿಗೆ ನೀರಿನಲ್ಲಿ ಪೊಟೇಷಿಯಂ, ಕ್ಯಾಲ್ಶಿಯಂ, ಸೆಲೆನಿಯಂ, ಕೋಪರ್ ಮತ್ತು ಮಾಂಗನೀಸ್ ಅಂಶ ಹೇರಳವಾಗಿರುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವನೆ ಮಾಡಿದರೆ ಎಷ್ಟೋ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
* ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗಿ ಜ್ವರವನ್ನು ಕಡಿಮೆಮಾಡುತ್ತದೆ.
 
* ಜೀರಿಗೆ ನೀರಿನ ಸೇವನೆಯಿಂದ ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುತ್ತದೆ.
 
* ಜೀರಿಗೆಯಲ್ಲಿನ ಪೋಷಕಾಂಶಗಳು ಜೀರ್ಣಾಂಗಗಳ ಒಳಭಾಗವನ್ನು ಪ್ರಚೋದಿಸಿ ಜೀರ್ಣರಸಗಳನ್ನು ಹೆಚ್ಚಾಗಿ ಸ್ರವಿಸುವಂತೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
 
* ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರತಿದಿನ ಜೀರಿಗೆ ನೀರನ್ನು ಕುಡಿಯಿರಿ
 
* ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.
 
* ಜೀರಿಗೆ ನೀರಿನ ಸೇವನೆಯಿಂದ ಮಲಬದ್ದತೆ, ಅಸಿಡಿಟಿಯಂತಹ ಸಮಸ್ಯೆಗಳನ್ನು ದೂರಮಾಡಬಹುದು.
 
* ಜೀರಿಗೆಯಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದಲ್ಲಿ ನೀರಿನ ಪ್ರಮಾಣ ಮತ್ತು ಎಲೆಕ್ಟ್ರೋಲೈಟುಗಳ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದರಿಂದ ರಕ್ತದ ಒತ್ತಡ ಏಕಪ್ರಕಾರವಾಗಿರುತ್ತದೆ.
 
* ಹೆರಿಗೆ ನೋವು ಕಾಣಿಸಿಕೊಂಡಾಗ ಜೀರಿಗೆ ನೀರನ್ನು ಕುಡಿಯಬೇಕು. ಇದರ ಸೇವನೆಯಿಂದ ನಿಜವಾದ ಹೆರಿಗೆ ನೋವು ಆಗಿದ್ದರೆ ನೋವು ಜಾಸ್ತಿ ಆಗುತ್ತದೆ, ಹೆರಿಗೆ ನೋವು ಅಲ್ಲವಾಗಿದ್ದರೆ ನೋವು ಕಡಿಮೆಯಾಗುತ್ತದೆ.
 
* ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ.
 
* ಗರ್ಭಾವಸ್ಥೆಯಲ್ಲಿ ನಿತ್ಯವೂ ಜೀರಿಗೆ ನೀರನ್ನು ಕುಡಿಯುವುದರಿಂದ ಮಗುವಿನ ಜನನ ದೋಷಗಳನ್ನು ಇದು ನಿವಾರಿಸುತ್ತದೆ ಮತ್ತು ತಡೆಗಟ್ಟುತ್ತದೆ.
 
* ಜೀರಿಗೆ ನೀರನ್ನು ಕುಡಿಯುವುದರಿಂದ ಮಹಿಳೆಯರಲ್ಲಿ ಎದೆ ಹಾಲು ಹೆಚ್ಚುತ್ತದೆ.
 
* ಡಯಾಬಿಟಿಸ್‌ನಿಂದ ಬಳಲುತ್ತಿರುವವರಿಗೆ ಜೀರಿಗೆ ನೀರು ಒಂದು ಶಕ್ತಿಯುತ ಔಷಧಿಯಾಗಿದೆ. ಇದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ನಿರ್ವಹಿಸಲು ಸಾಧ್ಯವಾಗುತ್ತದೆ.
 
* ಜೀರಿಗೆ ನೀರು ಕಬ್ಬಿಣದ ಅಂಶವನ್ನು ಹೊಂದಿರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಕಬ್ಬಿಣವಲ್ಲದೆ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಿ ಅಂಶಗಳೂ ಇದರಲ್ಲಿವೆ.
 
* ಗರ್ಭಿಣಿಯರಲ್ಲಿ ವಾಕರಿಕೆ, ಅತಿಸಾರ, ಬೆಳಗಿನ ಬೇನೆ ಮೊದಲಾದ ಸಮಸ್ಯೆಗಳಿಗೆ ಉಪಚಾರವನ್ನು ಜೀರಿಗೆ ನೀರು ನೀಡುತ್ತದೆ. ಪ್ರತೀದಿನದ ವೈದ್ಯಕೀಯ ಸಮಸ್ಯೆಗಳಿಗೆ ಈ ಸರಳ ಮಿಶ್ರಣ ತ್ವರಿತ ಪರಿಹಾರವನ್ನು ಒದಗಿಸುತ್ತದೆ.
 
* ಜೀರಿಗೆ ನೀರು ಸೇವಿಸುವುದರಿಂದ ರಕ್ತ ಪರಿಚಲನೆ ಸರಿಯಾಗುತ್ತದೆ. ಇದರಿಂದ ಮಾಂಸಖಂಡ ರಿಲ್ಯಾಕ್ಸ್‌ ಆಗುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ.
 
* ಜೀರಿಗೆ ನೀರಿನ ಸೇವನೆಯಿಂದ ಮೆದುಳು ರಿಲ್ಯಾಕ್ಸ್‌ ಆಗುತ್ತದೆ. ಅಲ್ಲದೆ ನಿದ್ರೆ ಚೆನ್ನಾಗಿ ಬರಲು ಇದು ಸಹಕಾರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments