Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ಪಾತ್ರೆಯಲ್ಲಿ ತಿಂಡಿ ಹಾಕಿಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಪ್ಲಾಸ್ಟಿಕ್ ಪಾತ್ರೆಯಲ್ಲಿ ತಿಂಡಿ ಹಾಕಿಡುತ್ತೀರಾ? ಹಾಗಿದ್ದರೆ ಇದನ್ನು ಓದಿ!
ಬೆಂಗಳೂರು , ಗುರುವಾರ, 23 ನವೆಂಬರ್ 2017 (08:26 IST)
ಬೆಂಗಳೂರು: ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.
 

ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಇಡಬೇಡಿ. ಒಂದು ವೇಳೆ ಪ್ಲಾಸ್ಟಿಕ್ ಪಾತ್ರೆ ಬಳಸುತ್ತಿದ್ದರೆ ಅದರ ತಳಭಾಗದಲ್ಲಿ #2, #3, #4 ಅಥವಾ #5 ಎಂದು ಗುಣಮಟ್ಟ ಬರೆಯಲಾಗಿದೆಯೇ ನೋಡಿ. ಹಾಗಿದ್ದರೂ ಪ್ಲಾಸ್ಟಿಕ್ ಪಾತ್ರೆ ಬಳಸುವಾಗ ಕೆಲವೊಂದು ಅಂಶಗಳ ಬಗ್ಗೆ ಗಮನಹರಿಸುವುದು ಒಳ್ಳೆಯದು.

ಮರು ಬಿಸಿ ಮಾಡಬೇಡಿ
ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ವಸ್ತುಗಳನ್ನು ಮೈಕ್ರೋಓವನ್ ನಲ್ಲಿಟ್ಟು ಬಿಸಿ ಮಾಡುವ ಕೆಲಸ ಮಾಡಬೇಡಿ. ಇದು ಒಂದು ರೀತಿಯ ರಾಸಾಯನಿಕ ಹೊರ ಸೂಸುವುದು. ಬಿಸಿ ಮಾಡಿದ ಆಹಾರವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕುವುದೂ ಒಳ್ಳೆಯದಲ್ಲ.

ಬಿಸಿ ನೀರಿನಿಂದ ದೂರವಿಡಿ
ಪ್ಲಾಸ್ಟಿಕ್ ಪಾತ್ರೆಗಳನ್ನು ಬಿಸಿ ನೀರಿನಿಂದ ತೊಳೆಯುವುದು ಅಥವಾ ಬಿಸಿ ನೀರನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಶೇಖರಿಸಿಡುವುದು ಸುರಕ್ಷಿತವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಬಿಡುಗಡೆಯಾಗುತ್ತದೆ.

ಹೀಗಾಗಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಶೇಖರಿಸಿಡುವ ಮೊದಲು ಇವುಗಳ ಬಗ್ಗೆ ಗಮನ ಹರಿಸುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾರೆಟ್ ತಿನ್ನುತ್ತಿದ್ದರೆ ಈ ಲಾಭ ಗ್ಯಾರಂಟಿ!