Webdunia - Bharat's app for daily news and videos

Install App

ಕೈಕಾಲುಗಳು ಮರಗಟ್ಟಿದಂತಾಗುವುದು ಇದರ ಲಕ್ಷಣಗಳು

Krishnaveni K
ಬುಧವಾರ, 20 ಮಾರ್ಚ್ 2024 (11:59 IST)
ಬೆಂಗಳೂರು: ಕೆಲವರಿಗೆ ಅಂಗೈ, ಬೆರಳುಗಳು ಅಥವಾ ಕಾಲು ಇದ್ದಕ್ಕಿದ್ದಂತೆ ಮರಗಟ್ಟಿದಂತಾಗುವ ಸಮಸ್ಯೆಗಳು ಕಂಡುಬರುತ್ತದೆ. ಆದರೆ ಇಂತಹ ಸಮಸ್ಯೆ ಬಂದರೆ ಅದನ್ನು ನಿರ್ಲಕ್ಷಿಸಬೇಡಿ.

ತಕ್ಷಣ ಕೆಲವೊಂದು ವಸ್ತುವನ್ನು ಹಿಡಿದುಕೊಳ್ಳಲು ಹಿಡಿತ ಸಿಗದೇ ಇರುವುದು, ಅಥವಾ ಸ್ಪರ್ಶದ ಅನುಭವ ಬರದೇ ಇರುವ ಸಾಧ‍್ಯತೆಯೂ ಇದೆ. ನಿಮ್ಮ ರಕ್ತನಾಳಗಳಲ್ಲಿ ಬ್ಲಾಕ್ ಗಳಿದ್ದಾಗ ಪ್ರಮುಖವಾಗಿ ಈ ರೀತಿಯ ಸಮಸ್ಯೆಗಳು ಬರುವ ಸಾಧ‍್ಯತೆಯಿರುತ್ತದೆ.

ರಕ್ತನಾಳದಲ್ಲಿ ಬ್ಲಾಕ್ ಅಥವಾ ಕ್ಷೀಣ ರಕ್ತಪರಿಚಲನೆಯಿಂದಾಗಿ ಕೈ ಅಥವಾ ಕಾಲು ಮರಗಟ್ಟಿದಂತಾಗುವುದು, ಜೋಮು ಹಿಡಿದಂತಾಗುವುದು ಆಗುವ ಅಪಾಯವಿದೆ. ಇದರಿಂದ ನಿಮಗೆ ನಡೆದಾಡಲು ಅಥವಾ ದೈನಂದಿನ ಕೆಲಸ ಮಾಡಲು ತೊಂದರೆಯಾಗಬಹುದು.

ನಿಮ್ಮ ದೇಹದಲ್ಲಿ ರಕ್ತದ ಪರಿಚಲನೆ ಚೆನ್ನಾಗಿ ಆಗಬೇಕಿದ್ದರೆ ವಿಟಮಿನ್ ಸಿ ಅಂಶ, ಒಮೆಗಾ-3 ಫ್ಯಾಟಿ ಆಸಿಡ್ ಅಂಶವಿರುವ ಆಹಾರ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಕಿತ್ತಳೆ, ನಿಂಬೆ, ಚೆರಿ ಅಥವಾ ಬೆರಿ ಹಣ್ಣುಗಳನ್ನು ಹೇರಳವಾಗಿ ಸೇವಿಸುತ್ತಿರಿ. ಜೊತೆಗೆ ಕಾಲು, ಕೈಗಳಿಗೆ ಚಟುವಟಿಕೆ ನೀಡುತ್ತಿದ್ದರೆ ಇಂತಹ ಸಮಸ್ಯೆಗಳನ್ನು ಆದಷ್ಟು ದೂರ ಮಾಡಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬ್ರಷ್ ಮಾಡುವ ಮೊದಲು ಕಾಫಿ ಕುಡಿಯುತ್ತೀರೆಂದರೆ ಇದನ್ನು ಓದಿ

ಒಣದ್ರಾಕ್ಷಿಯನ್ನು ನೆನೆಹಾಕಿ ಸೇವಿಸುವುದರ ಲಾಭ ತಿಳಿಯಿರಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮುಂದಿನ ಸುದ್ದಿ
Show comments