Publish Date: Sat, 14 Jul 2018 (10:05 IST)
Updated Date: Sat, 14 Jul 2018 (10:07 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಹಲವು ಕಡೆಯಿಂದ ಹಲವು ರೀತಿಯ ಸಲಹೆಗಳು ಕೇಳಿಬರುತ್ತವೆ. ಆದರೆ ಕೆಲವು ಸಲಹೆಗಳಿಂದ ನಯಾಪೈಸೆ ಉಪಯೋಗವಾಗಲ್ಲ. ಅವು ಯಾವುವು ನೋಡೋಣ.
ಶಬ್ಧ ಮಾಡಬೇಕು!
ಲೈಂಗಿಕ ಕ್ರಿಯೆ ಮಾಡುವಾಗ ಸಶಬ್ಧವಾಗಿ ಮಾಡಿದರೆ ಸಂಗಾತಿಗೆ ಖುಷಿಯಾಗುತ್ತದೆ ಎಂಬುದು ಶುದ್ಧ ಸುಳ್ಳು. ಎಲ್ಲರ ಅಭಿರುಚಿಯೂ ಒಂದೇ ರೀತಿ ಇರದು. ಶಬ್ಧ ಮಾಡುವುದಕ್ಕೂ ಸಂಭೋಗಕ್ಕೂ ಸಂಬಂಧವಿಲ್ಲ.
ರೊಮ್ಯಾನ್ಸ್ ವೇಳೆ
ರೊಮ್ಯಾನ್ಸ್ ಮಾಡುವಾಗ ರವಿಚಂದ್ರನ್ ಸಿನಿಮಾದಲ್ಲಿ ಬರುವಂತೆ ದ್ರಾಕ್ಷಿ, ಆಪಲ್ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತದೆ ಎಂಬುದು ಸಿನಿಮಾಕ್ಕೆ ಸರಿ. ಆದರೆ ನಿಜ ಜೀವನದಲ್ಲಿ ಇದು ವರ್ಕೌಟ್ ಆಗದು.
ಡ್ರೈವಿಂಗ್ ರೊಮ್ಯಾನ್ಸ್
ಡ್ರೈವಿಂಗ್ ಮಾಡುವಾಗ ಅದರಲ್ಲೂ ನಿಮ್ಮ ಸಂಗಾತಿ ಡ್ರೈವಿಂಗ್ ಮಾಡುವಾಗ ರೊಮ್ಯಾನ್ಸ್ ಮಾಡಬೇಡಿ. ಇದು ಥ್ರಿಲ್ಲಿಂಗ್ ಕೊಡುವುದಕ್ಕಿಂತ ಹೆಚ್ಚು ಅಪಾಯ ಮೈಮೇಲೆ ಎಳೆದುಕೊಳ್ಳುವುದೇ ಜಾಸ್ತಿ.
ಕಿಸ್ ಮಾಡುವುದೇ ಮೇಲು
ಲೈಂಗಿಕ ಕ್ರಿಯೆ ಸಂದರ್ಭ ಕಿಸ್ ಮಾಡುವುದೇ ದೊಡ್ಡದು ಎಂದು ನಂಬಿಕೊಂಡರೆ ಶುದ್ಧ ತಪ್ಪು. ಕಿಸ್ ಮಾಡುವುದರ ಹೊರತಾಗಿ ಇತರ ರೊಮ್ಯಾಂಟಿಕ್ ನಡೆಗಳು ಸಂಗಾತಿಗೆ ಇಷ್ಟವಾಗಬಹುದು. ಅವುಗಳನ್ನು ತಿಳಿದುಕೊಂಡು ಮುಂದುವರಿಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.