Select Your Language

Notifications

webdunia
webdunia
webdunia
webdunia

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳುವ ಸರಳ ಔಷಧಿಗಳ ಕುರಿತು ತಿಳಿದಿದೆಯೇ?

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳುವ ಸರಳ ಔಷಧಿಗಳ ಕುರಿತು ತಿಳಿದಿದೆಯೇ?
ಬೆಂಗಳೂರು , ಶುಕ್ರವಾರ, 13 ಜುಲೈ 2018 (19:03 IST)
ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ಒಂದು, ಪ್ರತಿಯೊಬ್ಬ ವ್ಯಕ್ತಿಯು ಈ ಕೆಮ್ಮಿನ ಸಮಸ್ಯೆಯಿಂದ ತೊಂದರೆ ಅನುಭವಿಸಿರುತ್ತಾನೆ

ಕೆಲವೊಮ್ಮೆ ನಮ್ಮಲ್ಲಿ ಕೆಲವರು ಆಸ್ಪತ್ರೆ ಸಿರಪ್‌ಗಳು ಹೀಗೆ ನಾನಾ ಔಷಧಿಗಳನ್ನು ತೆಗೆದುಕೊಂಡರು ಈ ಹಾಳದ ಕೆಮ್ಮು ನಿಲ್ಲೋಲ್ಲ ಅಂತಾ ಗೊಣಗುವುದನ್ನು ನಾವು ನೋಡಿರುತ್ತೇವೆ ಆದರೆ ನಮ್ಮ ಆಯುರ್ವೇದದಲ್ಲಿ ದಿನನಿತ್ಯ ನಮ್ಮ ಮನೆಯಲ್ಲಿಯೇ ಉಪಯೋಗಿಸುವ ವಸ್ತುಗಳಿಂದ ಸುಲಭವಾಗಿ ಈ ಒಣ ಕೆಮ್ಮಿನಿಂದ ಹೇಗೆ ಪಾರಾಗಬಹುದು ಎಂದು ಯೋಚಿಸುತ್ತಿರಾ ಇಲ್ಲಿದೆ ಓದಿ.
 
* ಜೇಷ್ಠಮದ್ದು ಪುಡಿಯನ್ನು ಬಿಸಿ ಬಿಸಿ ಹಾಲಿಗೆ ಸೇರಿಸಿಕೊಂಡು ದಿನಕ್ಕೆ 2 ಬಾರಿ ಸೇವಿಸಿದರೆ ಒಣಕೆಮ್ಮು ಕಡಿಮೆಯಾಗುತ್ತದೆ.
* ಹಸಿಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಪದೇ ಪದೇ ಸೇವಿಸಿದರೂ ಒಣ ಕೆಮ್ಮು ಕಡಿಮೆಯಾಗುತ್ತದೆ.
* ಒಣಶುಂಠಿ, ಕರಿಮೆಣಸು ಹಾಗೂ ಕಲ್ಲುಸಕ್ಕರೆ ಸೇರಿಸಿ ಪುಡಿ ಮಾಡಿ 2 ಚಿಟಿಕೆ ಅದರ ಪುಡಿಯನ್ನು ಪದೇ ಪದೆ ಬಾಯಗೆ ಹಾಕಿ ಚೀಪಿದರೆ ಒಣಕೆಮ್ಮು ಗುಣವಾಗುತ್ತದೆ. 
* ಹಸಿ ಈರುಳ್ಳಿ ರಸವನ್ನು ದಿನಕ್ಕೆ 3 ರಿಂದ 4 ಬಾರಿ ಕುಡಿದರೆ ಒಣಕೆಮ್ಮು ಶಮನವಾಗುತ್ತದೆ. 
* ಮಕ್ಕಳಲ್ಲಿ ಒಣಕೆಮ್ಮಿದ್ದರೆ ಒಣದ್ರಾಕ್ಷಿಯನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ಕಾಲು ಚಮಚದಿಂದ ಅರ್ಧ ಚಮಚ ಕಷಾಯವನ್ನು ಪದೇ ಪದೆ ಕುಡಿಸಿದರೆ ಕೆಮ್ಮು ಬೇಗ ನಿಲ್ಲುತ್ತದೆ. 
* ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಸುವಿನ ಹಾಲನ್ನು ಬಿಸಿ ಮಾಡಿ ಅದಕ್ಕೆ ಅರ್ಧ ಚಮಚ ಬಾದಾಮಿ ಎಣ್ಣೆ ಬೆರೆಸಿ ಕುಡಿದರೆ ಒಣಕೆಮ್ಮು ಶಮನವಾಗುತ್ತದೆ.
*ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿದರೆ ಕೂಡಾ ಶೀಘ್ರವಾಗಿ ಒಣಕೆಮ್ಮು ನಿವಾರಣೆ ಆಗುತ್ತದೆ.
 
ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಯಾವುದೇ ಅಡ್ಡಪರಿಣಾಮವಿಲ್ಲದೇ ಸುಲಭವಾಗಿ ಪರಿಹರಿಸಿಕೊಳ್ಳಬಹುದಾಗಿದೆ. ನೀವು ಒಮ್ಮೆ ಪ್ರಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಿಗಾಗಿ ಕೆಲವು ಸೌಂದರ್ಯದ ಟಿಪ್ಸ್...