ಮೊಡವೆ ಸಮಸ್ಯೆ ಇರುವವರು ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

Webdunia
ಸೋಮವಾರ, 22 ಅಕ್ಟೋಬರ್ 2018 (12:08 IST)
ಬೆಂಗಳೂರು : ಹೆಚ್ಚಿನವರು  ಮುಖದಲ್ಲಿ ಮೂಡುವ ಮೊಡವೆಗಳ ಸಮಸ್ಯೆಯಿಂದ ಕಂಗೆಟ್ಟಿರುತ್ತಾರೆ. ಅಂತವರ ಈ ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗದಿದ್ದರೂ ಅವರು ಈ ಆಹಾರಗಳನ್ನು ಸೇವಿಸದಿದ್ದರೆ ಮೊಡವೆ ಮೂಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಸಿಕೊಳ್ಳಬಹುದು.


ಬ್ರೆಡ್ : ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.


ಬಟಾಟೆ ಚಿಪ್ಸ್ : ಪೊಟ್ಯಾಟೋ ಚಿಪ್ಸ್ ತುಂಬಾ ರುಚಿಯಾದ ತಿಂಡಿ. ಆದರೆ ಮೊಡವೆಗಳು ಮೂಡುವಲ್ಲಿ ಇದರ ಪಾತ್ರ ಬಹು ದೊಡ್ಡದು. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಇನ್ಸುಲಿನ್ ಇರುತ್ತದೆ. ಇದರಿಂದಲೂ ಚರ್ಮ ಒಣಗಿ ಮೂಡವೆ ಮೂಡುತ್ತದೆ.


ಚಾಕೋಲೇಟ್ : ಇತ್ತೀಚಿನ ಸಂಶೋಧನೆಗಳಿಂದ ಚಾಕೋಲೇಟ್ ಮತ್ತು ಮೊಡವೆಗಳಿಗೆ ನೇರ ಸಂಬಂಧವಿದೆ ಎಂದು ತಿಳಿದುಬಂದಿದೆ. ಇದಕ್ಕೆ ಮುಖ್ಯ ಕಾರಣ ‘ಸಕ್ಕರೆ’, ಇದು ನಮ್ಮ ಚರ್ಮಕ್ಕೆ ನೇರವಾಗಿ ಹಾನಿಯುಂಟು ಮಾಡುತ್ತದೆ. ನಿಮಗೆ ಚಾಕೋಲೇಟ್ ತಿನ್ನಲೇಬೇಕೆನಿಸಿದರೆ ‘ಡಾರ್ಕ್ ಚಾಕೋಲೇಟ್’ ತಿನ್ನಿ.


ಸೋಡಾ : ಸೋಡಾದಲ್ಲಿ ಯಾವುದೇ ಪೋಷಕಾಂಶಗಳಿಲ್ಲ. ಹಾಗಾಗಿ ಇದು ನಿಮ್ಮ ಚರ್ಮಕ್ಕೆ ಯಾವುದೇ ರೀತಿಯಲ್ಲಿ ಒಳ್ಳೆಯದು ಮಾಡುವುದಿಲ್ಲ. ಇದರಲ್ಲಿ ಫ್ರಕ್ಟೋಸ್ ಅಂಶವಿದ್ದು, ಇದು ಸಕ್ಕರೆಯ ಮೂಲಾಂಶ. ಇದು ಚರ್ಮಕ್ಕೆ ಹಾನಿಕರ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments