Publish Date: Sat, 17 Oct 2020 (11:05 IST)
Updated Date: Sat, 17 Oct 2020 (11:08 IST)
ಬೆಂಗಳೂರು : ವೀಳ್ಯೆಲೆಯಲ್ಲಿ ಹಲವು ಔಷಧೀಯ ಗುಣಗಳಿವೆ, ಇದನ್ನು ಮನೆಮದ್ದು ತಯಾರಿಸಲು ಬಳಸುತ್ತಾರೆ. ಹಾಗೇ ಇದರಿಂದ ನಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.
ವೀಳ್ಯದೆಲೆ ಪೇಸ್ಟ್ ಮಾಢಿ ಅದಕ್ಕೆ ತೆಂಗಿನೆಣ್ಣೆ ಅಥವಾ ಎಳ್ಳಿನ ಎಣ್ಣೆ ಬೆರೆಸಿ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ, ವಾರಕ್ಕೆ 2 ಬಾರಿ ಮಾಡುವುದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ.
ವೀಳ್ಯದೆಲೆ ಪೇಸ್ಟ್ ಗೆ ಅರಿಶಿಣ ಹಾಕಿ ಕಲೆಯ ಜಾಗಕ್ಕೆ ಹಚ್ಚಿ. 5 ನಿಮಿಷ ನಂತರ ಮುಖವನ್ನು ಸ್ವಚ್ಚಗೊಳಿಸಿ. ದಿನಕ್ಕೆ 2 ಬಾರಿ ಹೀಗೆ ಮಾಡಿದ್ರೆ ಮುಖದ ಮೇಲಿನ ಕಲೆ ಮಾಯವಾಗುತ್ತದೆ.