Webdunia - Bharat's app for daily news and videos

Install App

ಊಟವಾದ ಬಳಿಕ ಸೋಂಪು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ…?

Webdunia
ಸೋಮವಾರ, 16 ಏಪ್ರಿಲ್ 2018 (06:03 IST)
ಬೆಂಗಳೂರು : ಊಟವಾದ ಬಳಿಕ ಬಡೆಸೊಪ್ (ಸೋಂಪು)ತಿನ್ನುವುದು ಅನಾದಿಕಾಲದಿಂದಲೂ ಬಂದ ಪದ್ಧತಿ. ಈ ಜಂಕ್ ಫುಡ್ ಯುಗದಲ್ಲಿ ಹಳೆಯ ಪದ್ದತಿಯನ್ನು ನಾವು ಮರೆತಿದ್ದೇವೆ. ಹಾಗು ಇಂತಹ ಆಹಾರಗಳಿಂದ ನಾವು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಊಟಮಾಡಿದ ನಂತರ ಸೋಪನ್ನು ಚೆನ್ನಾಗಿ ಅಗೆದು ನುಂಗುವುದರಿಂದ ಏನೆಲ್ಲಾ  ಪ್ರಯೋಜನಗಳುಂಟಾಗುತ್ತವೆ ಎಂಬುದನ್ನು ತಿಳಿಯಿರಿ.


* ಅಜೀರ್ಣ, ಗ್ಯಾಸ್, ಅಸಿಡಿಟಿ ಮಲಬದ್ಧತೆ ಮೊದಲಾದ ಸಮಸ್ಯೆಗಳು ಅನೇಕರನ್ನು ಕಾಡುತ್ತಿವೆ. ಆದುದ್ದರಿಂದ ಈ ಸಮಸ್ಯೆಗಳಿಂದ ನರಳುತ್ತಿರುವವರು ಊಟವಾದ ನಂತರ ಒಂದು ಚಮಚ ಸೋಂಪು ತಿಂದರೆ, ಜೀರ್ಣಾಶಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

* ವಾತ ದೋಷವನ್ನು ನಿವಾರಿಸುವ ಗುಣವಿರುವುದರಿಂದ ಸೋಂಪನ್ನು ತಿನ್ನುವುದರಿಂದ ದೇಹದ ಅಧಿಕ ಭಾರ ಸಮಸ್ಯೆ ತೊಲಗುತ್ತದೆ.

* ಊಟದ ನಂತರ ಸೋಂಪನ್ನು ತಿಂದರೆ ಬಾಯಿ ಫ್ರೆಶ್ ಆಗಿರುತ್ತದೆ. ಬಾಯಲ್ಲಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ನಾಶವಾಗುತ್ತವೆ. ಹಲ್ಲುಗಳು ಹಾಗು ವಸಡುಗಳು ಶುಭ್ರವಾಗುತ್ತವೆ.

* ಋತು ಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವಿರುತ್ತದೆ. ಸೋಂಪನ್ನು ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ ಹಾಗು ಋತು ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

* ಸೊಂಪಿನಲ್ಲಿ ಮ್ಯಾಂಗನೀಸ್, ಜಿಂಕ್, ಕಾಪರ್, ಐರನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೆಲೆನಿಯಮ್ ಮೊದಲಾದ ಖನಿಜ, ಲವಣಗಳಿವೆ, ಇವುಗಳು ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ.

*ಸೋಂಪ ಸೇವನೆ ರಕ್ತವನ್ನು ವೃದ್ದ್ಧಿಗೊಳಿಸಿ. ರಕ್ತ ಹೀನತೆಯನ್ನು ನಿವಾರಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಜ್ಜಿ ಮಾಡಲು ಬಯಸುವ ಕಡಲೆ ಹಿಟ್ಟಿನಿಂದ ಸೌಂದರ್ಯಕ್ಕೆ ಹಲವು ಪ್ರಯೋಜನ

ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ವಿಷಯಗಳು

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮುಂದಿನ ಸುದ್ದಿ
Show comments