Webdunia - Bharat's app for daily news and videos

Install App

ನಿಮಗೆ ಅರಿಶಿಣ ಹಾಲಿನ ಉಪಯೋಗಗಳು ತಿಳಿದಿದೆಯೇ?

Webdunia
ಗುರುವಾರ, 20 ಸೆಪ್ಟಂಬರ್ 2018 (17:10 IST)
ಹಾಲು ಒಂದು ಸಂಪೂರ್ಣ ಆಹಾರ. ಸಾಮಾನ್ಯವಾಗಿ ಶೀತವಾದಾಗ ಅಥವಾ ಕೆಮ್ಮು ಕಾಣಿಸಿಕೊಂಡಾಗ ಮನೆಯಲ್ಲಿ ಹಾಲಿನಿಂದ ನಾನಾ ವಿಧದ ಕಷಾಯಗಳನ್ನು ಮಾಡಿಕೊಂಡು ಕುಡಿಯುವುದು ರೂಢಿ ಅಲ್ಲವೇ. ಅಂತಹ ಮನೆಮದ್ದುಗಳಲ್ಲಿ ಅರಿಶಿನದ ಹಾಲೂ ಸಹ ಒಂದು. ಮತ್ತು ಇದು ತತ್‌ಕ್ಷಣದ ಪರಿಣಾಮವನ್ನು ನೀಡುತ್ತದೆ. ಅರಿಶಿನವೂ ಕೂಡಾ ಆಯುರ್ವೇದ ಶಾಸ್ತ್ರದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ದೇಹದಲ್ಲಿ ರೋಗ ನಿರೋಧಕ ಅಂಶಗಳನ್ನು ಹೆಚ್ಚಿಸುವುದಲ್ಲದೇ ಹಾಲು ಮತ್ತು ಅರಿಶಿಣವು ಉತ್ತಮವಾದ ಪ್ರತಿಜೀವಕಗಳಾಗಿವೆ. 
* ಅರಿಶಿನ ಹಾಲನ್ನು ತಯಾರಿಸುವ ವಿಧಾನ ಹೇಗೆ
 
ಒಂದು ಲೋಟ ಹಾಲಿಗೆ ಅರಿಶಿನ ಕೊಂಬನ್ನು ಹಾಕಿ 15 ನಿಮಿಷಗಳ ಕಾಲ ಕುದಿಸಿ ಆರಿಸಿ ಕುಡಿಯಬೇಕು. (ಮೆಣಸಿನ ಕಾಳನ್ನೂ ಸಹ ಬೇಕಾದರೆ ಸೇರಿಸಬಹುದು)
 
* ಅರಿಶಿನ ಹಾಲಿನ ಉಪಯೋಗಗಳು
 
- ಅರಿಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಇದು ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ಶೀತಕ್ಕೆ ತ್ವರಿತ ಪರಿಹಾರವನ್ನು ನೀಡುತ್ತದೆ. 
 
- ಮೂಳೆಗಳ ದೃಢತೆಗೆ ಅರಿಶಿನ ಹಾಲು ಸಹಕಾರಿಯಾಗುತ್ತದೆ. ಇದು  ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. 
 
- ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಹಾಲು ಸಹಾಯ ಮಾಡುತ್ತದೆ.
 
- ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ದೇಹವನ್ನು ಆಕ್ರಮಿಸುವುದನ್ನು ವಿರೋಧಿಸುತ್ತದೆ. 
 
- ಅರಿಶಿನ ಹಾಲನ್ನು ಸೇವಿಸುವುದರಿಂದ ಉಸಿರಾಟ ಸಂಬಂಧಿ ತೊಂದರೆಗಳು ಮತ್ತು ಸೈನಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ.
 
- ಅರಿಶಿನ ಹಾಲು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಗುದನಾಳದ ಕ್ಯಾನ್ಸರ್‌ನಂತಹ ಬೆಳವಣಿಗೆಗಳನ್ನು ತಡೆಯುತ್ತದೆ. 
 
- ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೋಫಾನ್‌ನ್ನು ಉತ್ಪಾದಿಸುವುದರಿಂದ ಇದನ್ನು ಮಲಗುವ ಮುಂಚೆ ಸೇವಿಸುವುದರಿಂದ ಶಾಂತಿಯುತ ಮತ್ತು ಸುಖವಾದ ನಿದ್ರೆಗೆ ಕಾರಣವಾಗುತ್ತದೆ.
 
- ಅರಿಶಿನ ಹಾಲು ಪಿತ್ತರಸದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೇ ಅಮ್ಲದ ಹಿಮ್ಮುಖ ಹರಿವು, ಹೊಟ್ಟೆಯುಬ್ಬರವನ್ನು ತಡೆಯುತ್ತದೆ. 
- ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆಯ ನಿವಾರಣೆಗೆ ಅರಿಶಿನದ ಹಾಲು ಉಪಯುಕ್ತ,
- ಅರಿಶಿನ ಹಾಲು ಆಂಟಿಸ್ಪಾಸ್ಮೊಡಿಕ್ ಸೆಳೆತವನ್ನು ಕಡಿಮೆ ಮಾಡಿ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.
- ದೇಹದಲ್ಲಿ ವಿಷವನ್ನು ಹೊರಹಾಕುವುದರಲ್ಲಿ ಯಕೃತ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರ್ಯಕ್ಕೆ ಅರಿಶಿನದ ಹಾಲು ನೆರವಾಗುತ್ತದೆ. 
- ಅರಿಶಿನ ಹಾಲಿನಲ್ಲಿ ಇರುವಂತಹ ಅತ್ಯುತ್ತಮವಾದ ಉರಿಯೂತ ಶಮನಕಾರಿ ಗುಣವು ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ.
- ಅರಿಶಿನದ ಹಾಲು ಮೂಳೆ ಮತ್ತು ಗಂಟುಗಳನ್ನು ಬಲಪಡಿಸಿ ನೋವು ನಿವಾರಿಸುವುದು. ದ್ರವವನ್ನು ಕಾಪಾಡಿಕೊಳ್ಳುವ ಕಾರಣ ಗಂಟುಗಳಲ್ಲಿ ಸ್ಥಿತಿಸ್ಥಾಪಕತ್ವ ಉಳಿದುಕೊಳ್ಳುವುದು.
 
- ಶ್ವಾಸನಾಳದಲ್ಲಿ ಕಫ ಶೇಖರಣೆಯಾಗುವುದನ್ನು ತಡೆಯುವ ಅರಿಶಿನ ಹಾಲು ಕಿರಿಕಿರಿ ಉಂಟುಮಾಡುವ ಗಂಟಲಿಗೆ ಶಮನವನ್ನು ನೀಡುತ್ತದೆ. ಇದರಿಂದ ಕಫ ಕಡಿಮೆಯಾಗಿ ಕಟ್ಟಿದ ಮೂಗು ತೆರೆಯುವುದು.
 
- ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆ ಮತ್ತು ಕೀಲುಗಳನ್ನು ಬಲಪಡಿಸುತ್ತದೆ.
- ಅರಿಶಿನ ಹಾಲು ಸ್ವತಂತ್ರ ರಾಡಿಕಲ್‌ಗೆ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು.
 
- ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.
- ಎಸ್ಕಿಮಾ ಚಿಕಿತ್ಸೆಗೆ ಅರಿಶಿನ ಹಾಲನ್ನು ಕುಡಿಯುವುದು ಉತ್ತಮ.
- ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು.
 
- ಅರಿಶಿನದಲ್ಲಿ ಆಂಟಿ ಬ್ಯಾಟಿಕ್ ಅಂಶ ಇರುವುದರಿಂದ ಹತ್ತಿಯನ್ನು ಅರಿಶಿನ ಹಾಲಿನಲ್ಲಿ ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಒತ್ತಿ 15 ನಿಮಿಷಗಳ ಕಾಲ ಬಿಟ್ಟರೆ ಬಹಳ ಬೇಗ ಗುಣವಾಗುತ್ತದೆ. ಮತ್ತು ಮೊದಲಿಗಿಂತಲೂ ಚರ್ಮ ಹೊಳೆಯುವಂತೆ ಮಾಡುತ್ತದೆ.
 
ಹಳಬರು ಅರಿಶಿನವನ್ನು ಆಯುರ್ವೇದ ಚಿಕಿತ್ಸಕ ಎಂದೇ ಕರೆದಿದ್ದಾರೆ. ಅರಿಶಿನದಲ್ಲಿರುವ ಎಲ್ಲಾ ಆರೋಗ್ಯಕಾರಿ ಅಂಶಗಳು ಹಲವಾರು ರೋಗಗಳಿಗೆ ರಾಮಬಾಣವಾಗಿದೆ ಮತ್ತು ಸರಳವಾದ ಪರಿಹಾರವೂ ಆಗಿದೆ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments