Select Your Language

Notifications

webdunia
webdunia
webdunia
webdunia

ದಿನವೂ 3-4 ನೆಲ್ಲಿಕಾಯಿಯನ್ನು ತಿನ್ನುವುದರಿಂದ ಯಾವೆಲ್ಲಾ ಉಪಯೋಗಗಳಿವೆ ಗೊತ್ತಾ...!?

ದಿನವೂ 3-4 ನೆಲ್ಲಿಕಾಯಿಯನ್ನು ತಿನ್ನುವುದರಿಂದ ಯಾವೆಲ್ಲಾ ಉಪಯೋಗಗಳಿವೆ ಗೊತ್ತಾ...!?
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (18:37 IST)
ನಾಗಶ್ರೀ ಭಟ್
 
ನೆಲ್ಲಿಕಾಯಿಯು ಉತ್ತಮ ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾಗಿದೆ. ಇದು ವಿಟಮಿನ್ C ಯ ಪ್ರಬಲ ಮೂಲವಾಗಿದ್ದು ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಅಧಿಕವಾಗಿ ಹೊಂದಿರುತ್ತದೆ. ನಮ್ಮ ಆಯುರ್ವೇದದಲ್ಲಿ ಇದನ್ನು ಅಪಾರವಾಗಿ ಬಳಸುತ್ತಾರೆ.

ನೆಲ್ಲಿಕಾಯಿಯನ್ನು ಬಳಸುವುದರಿಂದ 100 ಕ್ಕೂ ಅಧಿಕ ವರ್ಷಗಳಕಾಲ ಬದುಕಬಹುದು ಎಂದು ಆಯುರ್ವೇದ ಹೇಳುತ್ತದೆ. ಇದು ಅನೇಕ ಸಾಮಾನ್ಯ ಖಾಯಿಲೆಗಳಿಗೆ ರಾಮ-ಬಾಣವಾಗಿದೆ. ಭಾರತದಲ್ಲಿ ನೆಲ್ಲಿಕಾಯಿ ಸುಲಭವಾಗಿ ದೊರಕುವುದರಿಂದ ನಾವೆಲ್ಲರೂ ಅದರ ಉಪಯೋಗವನ್ನು ಸರಿಯಾಗಿ ಪಡೆದುಕೊಳ್ಳಬಹುದು. ದಿನವೂ 2-3 ನೆಲ್ಲಿಕಾಯಿಗಳನ್ನು ಸೇವಿಸುವುದರಿಂದ ಅನೇಕ ಉಪಯೋಗಗಳಿವೆ.
 
ನೆಲ್ಲಿಕಾಯಿಯ ಕೆಲವು ಉಪಯೋಗಗಳು:
 
* ನೆಲ್ಲಿಕಾಯಿ ಮೊಡವೆಯಾಗುವುದನ್ನು ಕಡಿಮೆ ಮಾಡುತ್ತದೆ.
 
* ನೆಲ್ಲಿಕಾಯಿ ಚರ್ಮ ರೋಗಗಳನ್ನು ಕಡಿಮೆ ಮಾಡುತ್ತದೆ. ಇದು ಪಿತ್ತವನ್ನು ತಡೆಗಟ್ಟುವುದರಿಂದ ಪಿತ್ತದಿಂದ ಉಂಟಾಗುವ ಚರ್ಮ ರೋಗಗಳನ್ನು ತಡೆಗಟ್ಟುತ್ತದೆ.
 
* ಇದು ಕೂದಲಿನ ಬೆಳವಣಿಗೆಯನ್ನು ಮತ್ತು ಬಣ್ಣವನ್ನು ಸಂಮೃದ್ಧಗೊಳಿಸುತ್ತದೆ. ಇದು ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ ಮತ್ತು ಬಿಳಿ ಕೂದಲಿನ ಸಮಸ್ಯೆಯಿಂದ ಕಾಪಾಡುತ್ತದೆ.
 
* ನೆಲ್ಲಿಕಾಯಿ ದೇಹವನ್ನು ವಿಕಿರಣಗಳಿಂದ ಕಾಪಾಡುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
webdunia
* ನೆಲ್ಲಿಕಾಯಿ ಕಫ, ಅಸ್ತಮಾ ಮತ್ತು ಕ್ಷಯ ರೋಗಗಳ ನಿವಾರಣೆಗೆ ಉತ್ತಮ ಔಷಧವಾಗಿದೆ.
 
* ಜೇನಿನೊಂದಿಗೆ ನೆಲ್ಲಿಕಾಯಿ ರಸವನ್ನು ಪ್ರತಿದಿನ ಸೇವಿಸುವುದು ಕಣ್ಣಿನ ದೃಷ್ಟಿಗೆ ಒಳ್ಳೆಯದು ಮತ್ತು ಇದು ರಕ್ತವನ್ನು ಶುದ್ಧಗೊಳಿಸುತ್ತದೆ.
 
* ನೆಲ್ಲಿಕಾಯಿ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮವಾದುದಾಗಿದೆ.
 
* ಯಕೃತ್ತಿನ ತೊಂದರೆಗೆ ನೆಲ್ಲಿಕಾಯಿ ದಿವ್ಯ ಔಷಧವಾಗಿದೆ.
 
* ನೆಲ್ಲಿಕಾಯಿ ಜ್ವರಕ್ಕೂ ಒಳ್ಳೆಯ ಔಷಧಿ.
 
* ನೆಲ್ಲಿಕಾಯಿ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಮತ್ತು ಹಿಮೋಗ್ಲೋಬಿನ್‌ನ ಪ್ರಾಮಾಣವನ್ನು ಅಭಿವೃದ್ಧಿಪಡಿಸುತ್ತದೆ.
 
* ನೆಲ್ಲಿಕಾಯಿ ದೇಹದಲ್ಲಿನ ಕೊಬ್ಬು ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
 
* ನೆಲ್ಲಿಕಾಯಿಯು ಹೆಣ್ಣು ಮತ್ತು ಗಂಡು ಇಬ್ಬರಲ್ಲಿಯೂ ಸಂತಾನೋತ್ಪತ್ತಿಯ ವ್ಯವಸ್ಥೆಯನ್ನು ಬಲಪಡಿಸುತ್ತದೆ.
 
* ನೆಲ್ಲಿಕಾಯಿಯು ಉಗುರು ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.
 
ಇಷ್ಟೊಂದು ಪ್ರಯೋಜನಕಾರಿಯಾಗಿರುವ ನೆಲ್ಲಿಕಾಯಿಯನ್ನು ಇನ್ನಾದರೂ ಪ್ರತಿದಿನ ತಪ್ಪದೇ ಬಳಸಬಹುದು ಅಲ್ಲವೇ...!!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ತ್ವಚೆಯನ್ನು ಸುರಕ್ಷಿತವಾಗಿ ಮತ್ತು ಅಂದವಾಗಿ ಇರಿಸಿಕೊಳ್ಳುವುದು ಹೇಗೆ..?