Webdunia - Bharat's app for daily news and videos

Install App

ಸೀಬೇಕಾಯಿ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂದು ಗೊತ್ತಾ?

Webdunia
ಮಂಗಳವಾರ, 31 ಅಕ್ಟೋಬರ್ 2023 (13:26 IST)
ಸೀಬೇಕಾಯಿ ಸುಲಭವಾಗಿ ಸಿಗುವ ಹಣ್ಣು. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸೀಬೇಕಾಯಿ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಎಷ್ಟು ಉಪಯುಕ್ತ ಎಂದು ಗೊತ್ತಾ?
 
ರೋಗ ನಿರೋಧ ಶಕ್ತಿ
ಸೀಬೇಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಹಾಗಾಗಿ ಇದು ಉತ್ತಮ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.
 
ಕ್ಯಾನ್ಸರ್ ದೂರ ಮಾಡುತ್ತದೆ
ಸೀಬೇಕಾಯಿಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕಣಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್  ಬಾರದಂತೆ ತಡೆಯುತ್ತದೆ.
 
ಹೃದಯ ಕಾಪಾಡುತ್ತದೆ
ಸೀಬೇಕಾಯಿ ದೇಹದಲ್ಲಿ ಸೋಡಿಯಂ ಮತ್ತು ಪೊಟೇಶಿಯಂ ಅಂಶವನ್ನು ಸಮತೋಲದಲ್ಲಿರಿಸುತ್ತದೆ. ಇದರಿಂದ ಸಹಜವಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಸಹಜವಾಗಿ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
 
ಮಲಬದ್ಧತೆ
ಸೀಬೇಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶ ಒದಗಿಸಬಲ್ಲದು. ಹಾಗಾಗಿ ಇದು ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ದೂರವಾಗಬಹುದು.
 
ಕಣ್ಣಿನ ಆರೋಗ್ಯ
ಸೀಬೇಕಾಯಿಯಲ್ಲಿ ವಿಟಮಿನ್ ಎ ಅಂಶವೂ ಬೇಕಾದಷ್ಟಿರುವ ಕಾರಣ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ದೃಷ್ಟಿ ಚುರುಕುಗೊಳ್ಳಬೇಕಾದರೆ ದಿನಕ್ಕೊಂದು ಸೀಬೇಕಾಯಿ ತಪ್ಪದೇ ತಿನ್ನಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments