Select Your Language

Notifications

webdunia
webdunia
webdunia
webdunia

ಮಧುಮೇಹಿಗಳು ನಿಮ್ಮ ಈ ಅಂಗದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಯಾಕೆ ಗೊತ್ತಾ?

ಮಧುಮೇಹಿಗಳು ನಿಮ್ಮ ಈ ಅಂಗದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಯಾಕೆ ಗೊತ್ತಾ?
ಬೆಂಗಳೂರು , ಗುರುವಾರ, 3 ಡಿಸೆಂಬರ್ 2020 (08:36 IST)
ಬೆಂಗಳೂರು : ಮಧುಮೇಹ ರೋಗದಿಂದ ಬಳಲುವವರು ಕಣ್ಣುಗಳು, ಮೂತ್ರಪಿಂಡ, ಮೆದುಳು ಮತ್ತು ಕಾಲುಗಳ ಸಮಸ್ಯೆಯಿಂದ ಬಳಲುತ್ತಾರೆ. ಅವರು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಜೊತೆಗೆ ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಹೌದು, ಮಧುಮೇಹಿಗಳ ಕಾಲಿನಲ್ಲಿ ಗಾಯಗಳಾದರೆ ಅದು ಬೇಗ ವಾಸಿಯಾಗುವುದಿಲ್ಲ. ಅದರಲ್ಲಿ ಹುಣ್ಣಾಗಿ, ಅದು ಸುಡುವ ವೇದನೆಯನ್ನು ಹೊಂದಿದ್ದು, ಕೊನೆಗೆ ಕಾಲನ್ನು ಕತ್ತರಿಸಬೇಕಾಗುತ್ತದೆ. ಹಾಗಾಗಿ ಮಧುಮೇಹಿಗಳು ತಮ್ಮ ಕಾಲಿನ ಬಗ್ಗೆ ಈ ರೀತಿಯಾಗಿ ಕಾಳಜಿ ವಹಿಸಿ.

ಪ್ರತಿದಿನ ಬೆಳಿಗ್ಗೆ ಎದ್ದು ನಿಮ್ಮ ಪಾದಗಳನ್ನು ಪರೀಕ್ಷಿಸಿ. ಅದರಲ್ಲಿ ಯಾವುದೇ ಗಾಯಗಳಿದೆಯೇ, ಬಿರುಕುಗಳಿದೆಯೇ ಎಂದು ಗಮನಿಸಿ. ನಿಮ್ಮ ಪಾದಗಳ ಚರ್ಮ ಒಣಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಿ. ಮನೆಯಲ್ಲಿದ್ದಾಗ ಚಪ್ಪಲಿ, ಸಾಕ್ಸ್ ಧರಿಸಿ. ಹೊರಗಡೆ ಹೋಗುವಾಗ ಆರಾಮದಾಯಕ ಚಪ್ಪಲಿಗಳನ್ನು ಬಳಸಿ.

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ನಷ್ಟವಾಗಲು ಸಬ್ಜಾ ಬೀಜಗಳನ್ನು ಈ ನೀರಿನಲ್ಲಿ ನೆನೆಸಿ ಕುಡಿಯಿರಿ