Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 2 ಜನವರಿ 2020 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ಸಂತಸದ ದಿನಗಳಿವು. ಶುಭ ಮಂಗಲ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದೃಢ ಮನಸ್ಸಿನಿಂದ ಹೆಜ್ಜೆ ಹಾಕಿದರೆ ಕಾರ್ಯರಂಗದಲ್ಲಿ ಯಶಸ್ಸು ಸಾಧ‍್ಯ. ಮೇಲಧಿಕಾರಿಗಳ ಕಿರಿ ಕಿರಿ ಇದ್ದರೂ ವೃತ್ತಿರಂಗದಲ್ಲಿ ಮುನ್ನಡೆ, ಅಭಿವೃದ್ಧಿ ಸಿಗಲಿದೆ.

ವೃಷಭ: ಸ್ವತಂತ್ರವಾಗಿ ಯೋಚನೆ ಮಾಡುವ ನಿಮ್ಮ ಗುಣದಿಂದ ಕಾರ್ಯರಂಗದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಮಿಥುನ: ಅಧಿಕಾರಿ ವರ್ಗದವರಿಂದ ಮನಸ್ಸಿಗೆ ನೆಮ್ಮದಿ ಇರದು. ವಿದ್ಯಾರ್ಥಿಗಳಿಗೆ ವಿದೇಶ ಯಾನದ ಯೋಗವಿದೆ. ಸಾಂಸಾರಿಕವಾಗಿ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ತೊಂದರೆ ಪರಿಹಾರವಾಗಲಿದೆ.

ಕರ್ಕಟಕ: ಉದಾರ ಮನೋಭಾವದಿಂದ ಆರ್ಥಿಕವಾಗಿ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಅನಿರೀಕ್ಷಿತವಾಗಿ ಧನಾಗಮವಾಗಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಹಿತಶತ್ರುಗಳ ಬಾಧೆ ನಿವಾರಣೆಯಾಗಲಿದೆ.

ಸಿಂಹ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಸಾಂಸಾರಿಕವಾಗಿ ಎದುರಾಗುವ ಕಷ್ಟಗಳಿಗೆ ಹಿರಿಯರ ಸಲಹೆ ಪಡೆಯಿರಿ. ದೂರ ಸಂಚಾರದಿಂದ ಕಾರ್ಯ ಸಿದ್ಧಿಯಾಗಲಿದೆ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ.

ಕನ್ಯಾ: ಸಹೋದ್ಯೋಗಿಗಳಿಗೆ ತೊಂದರೆ ಬಂದಾಗ ಸಹಾಯಕ್ಕೆ ಧಾವಿಸುವಿರಿ. ಅಧಿಕಾರಿಗಳಿಂದ ತೊಂದರೆ ಉಂಟಾಗಬಹುದು. ತಾಳ್ಮೆಯಿಂದಿರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಉದ್ಯೋಗ ವ್ಯವಹಾರ ರಂಗದಲ್ಲಿ ನಿಮ್ಮ ಕ್ರಿಯಾತ್ಮಕತೆಗೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಸ್ಥಾನ ಮಾನ ಅಧಿಕವಾಗಲಿದೆ. ವಾಹನ ಖರೀದಿ ಯೋಗವಿದೆ. ಆದರೆ ಚಾಲನೆಯಲ್ಲಿ ಎಚ್ಚರಿಕೆಯಿಂದಿರಬೇಕು. ಹಿತಶತ್ರುಗಳ ಕಾಟ ಎದುರಾಗಬಹುದು, ಎಚ್ಚರಿಕೆಯಿಂದಿರಿ.

ವೃಶ್ಚಿಕ: ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿದೆ. ಕಷ್ಟದ ಸಂದರ್ಭದಲ್ಲಿ ಮಿತ್ರರ ಸಹಕಾರ ದೊರೆಯಲಿದೆ. ಮಹಿಳೆಯರಿಂದ ತೊಂದರೆಗಳು ಎದುರಾಗಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಧನು: ಶನಿ ಕಾಟದಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಎದುರಾದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಎದುರಾಗಲಿದೆ. ವಾಹನ ಸಂಚಾರದಲ್ಲಿ ಎಚ್ಚರ. ಕೌಟುಂಬಿಕ ವಿವಾದಗಳು ಪರಿಹಾರವಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮಕರ: ಪ್ರಯತ್ನ ಬಲದಿಂದ ಕಾರ್ಯ ಸಿದ್ಧಿಯಾಗಬಹುದು. ಮನಸ್ಸಿಗೂ ಒತ್ತಡವಾಗಬಹುದು. ಆದರೆ ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗಬಹುದು. ಹಣಕಾಸಿನ ತೊಂದರೆಗೆ ಪರಿಹಾರ ಕಂಡುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕುಂಭ: ಆರ್ಥಿಕವಾಗಿ ಧನಲಾಭವಾಗಲಿದೆ. ಆದರೆ ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯವಾಗಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿಯಾಗುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಬೇಡದ ವಿಚಾರಗಳಿಗೆ ಚಿಂತೆ ಬೇಡ.

ಮೀನ: ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಹಲವು ಬಾರಿ ಯೋಚಿಸಿ ಮುಂದೆ ಹೆಜ್ಜೆಯಿಡಿ. ಆರೋಗ್ಯದಲ್ಲಿ ಸುಧಾರಣೆಯಾಗಬಹುದು. ಆದರೆ ಮಾನಸಿಕವಾಗಿ ಚಿತ್ತಚಾಂಚಲ್ಯ ಕಾಡಬಹುದು. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯ ಯೋನಿಯನ್ನು ಮುಟ್ಟಿದ ತಕ್ಷಣ ಹೀಗೆ ಆಗುತ್ತದೆ