Daily Horoscope

Select Your Language

Notifications

webdunia
webdunia
webdunia
webdunia

ಮದುವೆಯಾದರೆ ಮಾತ್ರ ಮಕ್ಕಳು ಹುಟ್ಟುತ್ತಾವಾ?

ಕಪಲ್ ರೋಮ್ಯಾನ್ಸ್
ಸಮಸ್ಯೆ: ಸರ್ ನನಗೀಗ 33 ವರ್ಷ. ನನ್ನ ಯಜಮಾನರಿಗೆ 38 ವರ್ಷವಾಗಿದೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ರೋಮ್ಯಾನ್ಸ್ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಆದರೆ ಸಂಭೋಗ ನಡೆಸಿದ ಬಳಿಕ ಗುಪ್ತಾಂಗದಿಂದ ವೀರ್ಯ ಹೊರ ಬರುತ್ತದೆ. ಇದರಿಂದ ಮಕ್ಕಳಾಗದಿರಬಹುದೇ? ಪರಿಹಾರ ತಿಳಿಸಿ.

ಸಲಹೆ: ನಿಮಗಿನ್ನೂ ಮದುವೆಯಾಗಿ ಮೂರ್ನಾಲ್ಕು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ. ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ. ಸಂಬೋಗದ ನಂತರ ಗುಪ್ತಾಂಗದಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.


ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು. ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿರಂತರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?