ಅಕ್ಕನ ಜೊತೆ ಲವ್ವಿ ಡವ್ವಿ - ತಂಗಿಯ ಜೊತೆ ಹನಿಮೂನ್ ಮುಗಿಸಿದ ಹುಡುಗ

Webdunia
ಬುಧವಾರ, 22 ಜನವರಿ 2020 (15:12 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಉತ್ತಮ ಉದ್ಯೋಗದಲ್ಲಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಒಬ್ಬಳ ಜತೆ ಪ್ರೇಮದಲ್ಲಿ ಸಿಲುಕಿರುವೆ. ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಆದರೆ ಕೆಲವು ತಿಂಗಳ ಹಿಂದೆ ಆಕೆಯು  ತನ್ನ ತಂಗಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ನನ್ನ ಪ್ರೇಯಸಿಗಿಂತ ಚೆಲುವೆ.

ನನ್ನ ಪ್ರೇಯಸಿಗೆ ತಿಳಿಯದಂತೆ ಆಕೆಯ ತಂಗಿಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಅಕ್ಕಳನ್ನು ಮದುವೆಯಾಗಬೇಕೋ ಅಥವಾ ಅವಳ ತಂಗಿಯನ್ನೋ ಎನ್ನುವ ಗೊಂದಲಕ್ಕೆ ಒಳಗಾಗಿರುವೆ. ಪರಿಹಾರ ತಿಳಿಸಿರಿ.

ಉತ್ತರ: ಹೆಣ್ಣು ಒಬ್ಬನನ್ನೇ ಪ್ರೀತಿಸಿ ಮದುವೆಯಾಗುವ ಸಾವಿರಾರು ಕನಸು ಕಂಡಿರುತ್ತಾಳೆ. ನಿಮ್ಮ ಹುಡುಗಿ ಸಹ ನಿಮ್ಮ ಬಗ್ಗೆ ಬೆಟ್ಟದಷ್ಟು ಆಸೆ, ಪ್ರೀತಿ ಇಟ್ಟುಕೊಂಡಿದ್ದಾಳೆ. ಆದರೆ ನೀವು ಆಕೆಗೆ ಗೊತ್ತಾಗದಂತೆ ಆಕೆಯ ತಂಗಿಯನ್ನೂ ಪ್ರೀತಿಸಲು ಶುರು ಮಾಡಿದ್ದೀರಿ. ಇದರ ಅರ್ಥ ನೀವು ನಿಮ್ಮ ಪ್ರೇಯಸಿ ಇಲ್ಲವೇ ಆಕೆಯ ತಂಗಿಯ ಬಾಹ್ಯರೂಪಕ್ಕೆ ಮಾತ್ರ ಬೆಲೆ ಕೊಡುತ್ತಿದ್ದೀರಿ ಎಂದರ್ಥ.

ನಿಮ್ಮದು ಪ್ರೀತಿ ಅಲ್ಲ. ಕೇವಲ ಆಕರ್ಷಣೆ ಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಿಮ್ಮ ಮನಸ್ಸಿನಿಂದ ಹಾಗೂ ನಿಷ್ಕಲ್ಮಶ ಪ್ರೀತಿಯಿಂದ ಯೋಚನೆ ಮಾಡಿ ಒಂದು ಸೂಕ್ತ ನಿರ್ಧಾರಕ್ಕೆ ಬನ್ನಿ. ಮೋಹದ ಬಲೆಯಲ್ಲಿ ಪ್ರೀತಿಗೆ ಅಪಮಾನ ಮಾಡಬೇಡಿ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments