Select Your Language

Notifications

webdunia
webdunia
webdunia
webdunia

60 ವರ್ಷ ಆದ ಮೇಲೂ ಹೆಚ್ಚು ಲೈಂಗಿಕ ಸುಖ ಬೇಕಾದ್ರೆ ಹೀಗೆ ಮಾಡಿ

60 ವರ್ಷ ಆದ ಮೇಲೂ ಹೆಚ್ಚು ಲೈಂಗಿಕ ಸುಖ ಬೇಕಾದ್ರೆ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 12 ಜನವರಿ 2020 (20:39 IST)
ಹೊಸದಾಗಿಮದುವೆಯಾದಾಗ ಇದ್ದಂತಹ ಲೈಂಗಿಕ ಆಸಕ್ತಿ ಕುಗ್ಗುತ್ತಿದೆಯೆ? ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ನಾನಾ ಕಸರತ್ತು ಮಾಡುತ್ತಿರುವಿರಾ? 

ಯಾವುದೇ ಮಾತ್ರೆಗಳನ್ನು ನುಂಗುತ್ತಿರುವಿರಾ? ಅದನ್ನೆಲ್ಲ ಬಿಟ್ಟುಬಿಡಿ, ಪ್ರತಿದಿನ ಹದಿನೈದು ದಿನಗಳ ಕಾಲ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ.

ಎಡಿನ್‌ಬರ್ಗ್‌ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ ಒಂದು ಗ್ಲಾಸ್ ತಾಜಾ ದಾಳಿಂಬೆ ಹಣ್ಣಿನ ರಸ ಹೀರಿದರೆ, ಟೆಸ್ಟೋಸ್ಟಿರಾನ್ ಹಾರ್ಮೋನ್ ಚಟುವಟಿಕೆ ಜಾಸ್ತಿಯಾಗುತ್ತದೆ.
ಅದರಿಂದ ಲೈಂಗಿಕ ಆಸಕ್ತಿ ತಾನಾಗಿಯೇ ಅರಳುತ್ತದಂತೆ.

ಹದಿಹರೆಯದವರು ಮಾತ್ರವಲ್ಲ, ಅರವತ್ತು ವಯಸ್ಸು ಮೀರಿದವರೂ ಕೂಡ ದಾಳಿಂಬೆ ಹಣ್ಣಿನ ರಸದಿಂದ ಬಾಳನ್ನು ಸರಸಮಯವಾಗಿಸಿಕೊಳ್ಳಬಹುದು. ಸುಮಾರು ಹದಿನೈದು ದಿನಗಳ ಕಾಲ ನಡೆಸಿದ ಅಧ್ಯಯನದಿಂದ ಪುರುಷ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಉತ್ಪತ್ತಿಯಾಗುವುದು ಜಾಸ್ತಿಯಾಗಿರುವುದು ಕಂಡುಬಂದಿದೆಯಂತೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿ, ಪ್ರೇಮ, ಕಾಮದ ಆಟ ಶುರು ಮಾಡೋದು ಹೇಗೆ?